ADVERTISEMENT

ಹೊಸ ಖಾಸಗಿ ವಿ.ವಿಗಳಿಗೆ ಸದ್ಯಕ್ಕಿಲ್ಲ ಅನುಮತಿ

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 21:44 IST
Last Updated 2 ಜುಲೈ 2024, 21:44 IST

ಬೆಂಗಳೂರು: ಯಾವುದೇ ಖಾಸಗಿ ವಿಶ್ವವಿದ್ಯಾಲಯ ಸ್ಥಾಪನೆಗೆ ಸದ್ಯಕ್ಕೆ ಅನುಮೋದನೆ ನೀಡದಿರಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ರಾಜ್ಯದಲ್ಲಿ ಪ್ರಸ್ತುತ 27 ಖಾಸಗಿ ವಿಶ್ವವಿದ್ಯಾಲಯಗಳಿವೆ. ವಿಜಯಪುರದಲ್ಲಿ ಅಲ್‌ ಅಮೀನ್‌ ವಿಶ್ವವಿದ್ಯಾಲಯ, ಚಿಕ್ಕಬಳ್ಳಾಪುರದಲ್ಲಿ ಬಿಆರ್‌ಎಸ್‌ ವಿಶ್ವವಿದ್ಯಾಲಯ, ಮಂಗಳೂರಿನ ಲಕ್ಷ್ಮೀ ಸ್ಮಾರಕ ಶಿಕ್ಷಣ ಟ್ರಸ್ಟ್‌ನ ಎಜೆ ವಿಶ್ವವಿದ್ಯಾಲಯ, ಬೆಂಗಳೂರಿನ ಎಂ.ಜಿ ಚಾರಿಟೆಬಲ್‌ ಟ್ರಸ್ಟ್‌ನ ಈಸ್ಟ್‌ ಪಾಯಿಂಟ್‌ ವಿಶ್ವವಿದ್ಯಾಲಯ, ಗೋಪಾಲನ್ ವಿಶ್ವವಿದ್ಯಾಲಯ, ರಾಮನಗರದಲ್ಲಿ ಸೆಂಟರ್‌ ಫಾರ್‌ ಮುಸ್ಲಿಂ ಅಸೋಸಿಯೇಷನ್‌ ​​ಆಫ್ ಕರ್ನಾಟಕದ ಸಿಎಂಎ ವಿಶ್ವವಿದ್ಯಾಲಯ, ಆರ್.ಎನ್.ಶೆಟ್ಟಿ ವಿಶ್ವವಿದ್ಯಾಲಯ, ಮೈಸೂರಿನಲ್ಲಿ ಮಹಾರಾಜ ವಿಶ್ವವಿದ್ಯಾಲಯ, ಕಣಚೂರ್ ಇಸ್ಲಾಮಿಕ್ ಎಜುಕೇಶನ್‌ ಟ್ರಸ್ಟ್‌ ವಿಶ್ವವಿದ್ಯಾಲಯ ಸ್ಥಾಪನೆ ಕೋರಿ ಸರ್ಕಾರಕ್ಕೆ ಒಟ್ಟು ಒಂಬತ್ತು ಅರ್ಜಿಗಳು ಸಲ್ಲಿಕೆಯಾಗಿವೆ.

‘ಹಿಂದೆ ಸ್ಥಾಪನೆಯಾದ ಬಹುತೇಕ ವಿಶ್ವವಿದ್ಯಾಲಯಗಳು ಬಿಜೆಪಿ–ಜೆಡಿಎಸ್‌ ಅವಧಿಯಲ್ಲಿ ಅನುಮೋದನೆ ಪಡೆದಿವೆ. ಖಾಸಗಿ ವಿಶ್ವವಿದ್ಯಾನಿಲಯಗಳು ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿವೆ. ಬಡ ವಿದ್ಯಾರ್ಥಿಗಳಿಗೆ ಇಂತಹ ವಿಶ್ವವಿದ್ಯಾಲಯಗಳಿಂದ ಯಾವುದೇ ಪ್ರಯೋಜನವಾಗದು. ಅವುಗಳ ನಿಯಂತ್ರಣ, ಮೇಲ್ವಿಚಾರಣೆಗೆ ಏಕರೂಪದ ಕಾನೂನಿನ ಅಗತ್ಯವಿದೆ. ಹಾಗಾಗಿ, ಸದ್ಯಕ್ಕೆ ಯಾವುದೇ ಹೊಸ ವಿಶ್ವವಿದ್ಯಾಲಯ ಸ್ಥಾಪನೆಗೆ ಅನುಮತಿ ನೀಡುವುದು ಬೇಡ ಎಂದು ಮುಖ್ಯಮಂತ್ರಿ ಸೂಚಿಸಿದ್ದಾರೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.