ADVERTISEMENT

ಸಾರಿಗೆ ಸಿಬ್ಬಂದಿ ಕಣ್ಣಿನ ಆರೈಕೆಗೆ ‘ಆಶಾಕಿರಣ’: ದಿನೇಶ್ ಗುಂಡೂರಾವ್

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2024, 15:39 IST
Last Updated 13 ಮಾರ್ಚ್ 2024, 15:39 IST
<div class="paragraphs"><p>ದಿನೇಶ್ ಗುಂಡೂರಾವ್</p></div>

ದಿನೇಶ್ ಗುಂಡೂರಾವ್

   

ಬೆಂಗಳೂರು: ಸಾರ್ವಜನಿಕ ಸಾರಿಗೆ ಸಿಬ್ಬಂದಿಯ ಕಣ್ಣಿನ ಹಾರೈಕೆಗಾಗಿ ‘ಸಾರಿಗೆ ಆಶಾಕಿರಣ’ ಯೋಜನೆ ಜಾರಿಗೊಳಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ವಿಧಾನಸೌಧದಲ್ಲಿ ಬುಧವಾರ ರಾಜ್ಯ ಸರ್ಕಾರದ ಸಮಗ್ರ ನೇತ್ರ ಆರೈಕೆ–ಆಶಾಕಿರಣ ಯೋಜನೆ ಬಲಿಷ್ಠಗೊಳಿಸಲು ‘ಸಿ–ಕ್ಯಾಂಪ್‌’ ಹಾಗೂ ‘ಆ್ಯಕ್ಟ್‌ ಫಾರ್‌ ಹೆಲ್ತ್‌’ ಸಂಸ್ಥೆಯ ಜತೆ ಒಪ್ಪಂದ ಮಾಡಿಕೊಂಡ ನಂತರ ಅವರು ಮಾತನಾಡಿದರು.

ADVERTISEMENT

ಸಿಬ್ಬಂದಿಯ ಕಣ್ಣಿನ ಆರೋಗ್ಯದ ಮೇಲೆ ನಿಗಾ ಇಡಲಾಗುತ್ತದೆ. ನಿರಂತರ ತಪಾಸಣೆಗಳ ಮೂಲಕ ಕಣ್ಣಿನ ಸಮಸ್ಯೆ ಪತ್ತೆ ಹಚ್ಚಲಾಗುತ್ತದೆ. ಬಸ್‌ ಡಿಪೊಗಳಿಗೆ ತೆರಳಿ ತಪಾಸಣೆ ನಡೆಸಿ, ಅಗತ್ಯವಿದ್ದವರಿಗೆ ಶಸ್ತ್ರಚಿಕಿತ್ಸೆ, ಉಚಿತ ಕನ್ನಡ ನೀಡಲಾಗುತ್ತದೆ. ಸಾರಿಗೆ ಸಿಬ್ಬಂದಿಯ ಕಣ್ಣಿನ ಆರೋಗ್ಯ ಉತ್ತಮವಾಗಿದ್ದರೆ ಬಸ್‌ಗಳಲ್ಲಿ ನಿತ್ಯ ಪ್ರಯಾಣಿಸುವ 1.10 ಕೋಟಿ ಪ್ರಯಾಣಿಕರ ಸುರಕ್ಷತೆಯನ್ನೂ ಖಾತ್ರಿಗೊಳಿಸಬಹುದು ಎಂದರು.

ರಾಜ್ಯದಲ್ಲಿ ಅಂಧತ್ವ ಸಂಪೂರ್ಣ ನಿವಾರಣೆಗೆ ಸರ್ಕಾರ ಶ್ರಮಿಸುತ್ತಿದೆ. ಜನರ ಮನೆ ಬಾಗಿಲಿಗೇ ತೆರಳಿ ಸೇವೆ ಒದಗಿಸಲಾಗುತ್ತಿದೆ. ಈಗಾಗಲೇ ಒಂದು ಕೋಟಿಗೂ ಹೆಚ್ಚಿನ ವ್ಯಕ್ತಿಗಳ ತಪಾಸಣೆ ಮಾಡಲಾಗಿದೆ. 39 ಸಾವಿರ ಮಂದಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. 2.45 ಲಕ್ಷ ಜನರು ಉಚಿತ ಕನ್ನಡ ಪಡೆದಿದ್ದಾರೆ ಎಂದು ವಿವರ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.