ADVERTISEMENT

ನಕಲಿ ಕರೆ: ₹13 ಲಕ್ಷ ಕಳೆದುಕೊಂಡ ಬ್ಯಾಂಕ್‌ ಮ್ಯಾನೇಜರ್‌!

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2024, 2:06 IST
Last Updated 16 ಫೆಬ್ರುವರಿ 2024, 2:06 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಹಾವೇರಿ: ಮುಂಬೈ ಏರ್‌ಪೋರ್ಟ್‌ ಕಸ್ಟಮ್‌ ಅಧಿಕಾರಿಗಳ ಬಳಿ ಸಿಕ್ಕಿರುವ ಪಾರ್ಸಲ್‌ ಪರಿಶೀಲನೆಗಾಗಿ ಸ್ಕೈಫ್‌ ಅಪ್ಲಿಕೇಶನ್‌ ಇನ್‌ಸ್ಟಾಲ್‌ ಮಾಡಿಸಿ, ಬ್ಯಾಂಕ್‌ ವ್ಯವಸ್ಥಾಪಕರಿಗೆ ₹13.15 ಲಕ್ಷ ವಂಚಿಸಲಾಗಿದೆ.

ನಗರದ ಬಜಾಜ್‌ ಫೈನಾನ್ಸ್‌ ಬ್ಯಾಂಕ್‌ ವ್ಯವಸ್ಥಾಪಕ ವಿರೂಪಾಕ್ಷಿ ವೀರಪ್ಪ ಶಿರಗಣ್ಣನವರ (43) ವಂಚನೆಗೆ ಒಳಗಾದವರು. ಇವರು ಮೂಲತಃ ಹುಬ್ಬಳ್ಳಿಯ ಮೊರಾರ್ಜಿ ನಗರದವರು.

ADVERTISEMENT

‘ವಿರೂಪಾಕ್ಷಿ ಅವರಿಗೆ ಅನಾಮಧೇಯ ವ್ಯಕ್ತಿಯೊಬ್ಬರು ಕರೆ ಮಾಡಿ, ಫೆಡೆಕ್ಸ್‌ ಕೊರಿಯರ್‌ ಕಂಪನಿಯಿಂದ ಮಾತನಾಡುತ್ತಿದ್ದೇವೆ. ನಿಮ್ಮ ಹೆಸರಿನಲ್ಲಿ ತೈವಾನ್‌ ದೇಶಕ್ಕೆ ಇಂಟರ್‌ನ್ಯಾಷನಲ್‌ ಕೊರಿಯರ್‌ ಬುಕ್‌ ಆಗಿದ್ದು, ಅದು ವಿಲೇವಾರಿಯಾಗದೆ ಮುಂಬೈ ಏರ್‌ಪೋರ್ಟ್‌ ಕಸ್ಟಮ್‌ ಅಧಿಕಾರಿಗಳ ಬಳಿ ಸಿಕ್ಕಿದೆ. ಅದರಲ್ಲಿ ಇತರ ಸಾಮಗ್ರಿ ಜತೆ 950 ಗ್ರಾಂ ಎಂ.ಡಿ.ಎಂ.ಎ. ಡ್ರಗ್ಸ್‌ ಇದೆ ಎಂದು ಹೇಳಿ ಹೆದರಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದರು. 

‘ಕಸ್ಟಮ್‌ ಅಧಿಕಾರಿಗಳಿಗೆ ಕರೆ ವರ್ಗಾಯಿಸಿ, ವಿರೂಪಾಕ್ಷಿ ಅವರಿಂದ ಸ್ಕೈಫ್‌ ಅಪ್ಲಿಕೇಶನ್‌ ಇನ್‌ಸ್ಟಾಲ್‌ ಮಾಡಿಸಿದ್ದಾರೆ. ನಂತರ ಐಡಿ, ಪಾಸ್‌ವರ್ಡ್‌ಗಳನ್ನು ತೆಗೆದುಕೊಂಡು ವಿಡಿಯೊ ಕಾಲ್‌ ಮಾಡಿ ಬ್ಯಾಂಕ್‌ ಖಾತೆಯಲ್ಲಿದ್ದ ₹13.15 ಲಕ್ಷ ಹಣವನ್ನು ಆರ್‌.ಟಿ.ಜಿ.ಎಸ್‌. ಮೂಲಕ ಅವರ ಖಾತೆಗೆ ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾರೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ. 

ನಗರದ ಸಿ.ಇ.ಎನ್‌. ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.