ನವದೆಹಲಿ: ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ) ಉಲ್ಲಂಘನೆ ಮಾಡಿದ ಆರೋಪದ ಮೇಲೆ ಕರ್ನಾಟಕದ 95 ಸ್ವಯಂ ಸೇವಾ ಸಂಸ್ಥೆಗಳ (ಎನ್‌ಜಿಒ) ಪರವಾನಗಿಯನ್ನು ರದ್ದು ಮಾಡಲಾಗಿದೆ.
ಪರವಾನಗಿಯನ್ನು ರದ್ದು ಮಾಡುವಂತೆ ಇನ್ಫೊಸಿಸ್ ಪ್ರತಿಷ್ಠಾನ ಈ ಮೊದಲೇ ಮನವಿ ಮಾಡಿತ್ತು. ಹೀಗಾಗಿ, ಪ್ರತಿಷ್ಠಾನವನ್ನು ಸೇರಿಸಿ, ಉಳಿದ ಎನ್‌ಜಿಒಗಳು ಪ್ರಸಕ್ತ ಸಾಲಿನಲ್ಲಿ ವಿದೇಶಿ ದೇಣಿಗೆಯನ್ನು ಪಡೆಯುವಂತಿಲ್ಲ.
2012 ರಿಂದ ಈ ವರೆಗೆ ಕರ್ನಾಟಕದ ಒಟ್ಟು 1,444 ಎನ್‌ಜಿಒಗಳು ಪರವಾನಗಿಯನ್ನು ಕಳೆದುಕೊಂಡಿವೆ. ಇವುಗಳಲ್ಲಿ ನಾಲ್ಕು ಎನ್‌ಜಿಒಗಳ ಪರವಾನಗಿಯನ್ನು ಅವುಗಳ ಮನವಿಯ ಮೇರೆಗೆ ರದ್ದು ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.