ADVERTISEMENT

ಶಾಲಾ ಮಕ್ಕಳಿಗೂ ಹಬ್ಬದೂಟ: ಬಿಸಿಯೂಟದಲ್ಲಿ ಋತುಮಾನದ ಹಣ್ಣು ಬಳಕೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2024, 15:15 IST
Last Updated 2 ಆಗಸ್ಟ್ 2024, 15:15 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಹಬ್ಬ, ಮದುವೆ, ಜನುಮ ದಿನ ಮತ್ತಿತರ ವಿಶೇಷ ಸಂದರ್ಭಗಳಲ್ಲಿ ದಾನಿಗಳ ನೆರವು ಪಡೆದು ಶಾಲಾ ಮಕ್ಕಳಿಗೆ ವಿಶೇಷ ಭೋಜನ ವ್ಯವಸ್ಥೆ ಮಾಡಬೇಕು. ಆಯಾ ಪ್ರದೇಶದಲ್ಲೇ ಬೆಳೆಯುವ ಋತುಮಾನದ ಹಣ್ಣುಗಳನ್ನು ನೀಡಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ಬಿಸಿಯೂಟ ಯೋಜನೆಯಲ್ಲಿ ಸಮುದಾಯದ ಸಹಭಾಗಿತ್ವ ಉತ್ತೇಜಿಸಲು ಆಯಾ ಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳು ಕ್ರಮ ಕೈಗೊಳ್ಳಬೇಕು. ಸ್ವಯಂ ಸೇವಾ ಸಂಸ್ಥೆಗಳು, ಕೈಗಾರಿಕೆಗಳು, ವಾಣಿಜ್ಯ, ವ್ಯಾಪಾರದ ಪ್ರಮುಖರು, ಸಮುದಾಯದ ಸದಸ್ಯರ ನೆರವು ಪಡೆಯಬೇಕು. ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರ ಜನುಮ ದಿನ, ರಾಜ್ಯ ಸ್ಥಾಪನೆಯ ದಿನಗಳು, ರಾಷ್ಟ್ರೀಯ ಪ್ರಾಮುಖ್ಯತೆಯ ದಿನಗಳಲ್ಲಿ ಅಂಥವರ ನೆರವು ಪಡೆದು ವಿಶೇಷ ಭೋಜನಕ್ಕೆ ವ್ಯವಸ್ಥೆ ಮಾಡಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಸೂಚಿಸಿದ್ದಾರೆ. 

ADVERTISEMENT

‘ತಿಥಿ’ ಪದ ಬಳಕೆ:

ಆಯುಕ್ತರ ಆದೇಶದಲ್ಲಿ ವಿಶೇಷ ಭೋಜನಕ್ಕೆ ‘ತಿಥಿ ಭೋಜನ’ ಎಂದು ಬಳಸಲಾಗಿದೆ. ‘ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ವಿಶೇಷ ಭೋಜನಕ್ಕೆ ತಿಥಿ ಭೋಜನ ಎಂದು ಬಳಸುವುದು ರೂಢಿಯಲ್ಲಿದ್ದು, ಪಿ.ಎಂ. ಪೋಷಣ್‌ ಆದೇಶದಲ್ಲಿರುವ ಪದವನ್ನೇ ರಾಜ್ಯದ ಶಿಕ್ಷಣ ಇಲಾಖೆ ಸುತ್ತೋಲೆಯಲ್ಲಿ ಯಥಾವತ್ ಬಳಸಲಾಗಿದೆ’ ಎಂದು ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.