ADVERTISEMENT

ಯಲಬುರ್ಗಾ: ವೇದಿಕೆ ಮೇಲೆ ಬಿಜೆಪಿ, ಕಾಂಗ್ರೆಸ್ ನಾಯಕರ ಜಟಾಪಟಿ, ಹೊಯ್ ಕೈ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2023, 12:32 IST
Last Updated 18 ಫೆಬ್ರುವರಿ 2023, 12:32 IST
   

ಯಲಬುರ್ಗಾ (ಕೊಪ್ಪಳ ‌ಜಿಲ್ಲೆ): ಯಲಬುರ್ಗಾ ಪಟ್ಟಣದಲ್ಲಿ ಶನಿವಾರ ನಡೆದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಮೂರ್ತಿ ಅನಾವರಣ ಹಾಗೂ ಶಿಲಾ ಮಂಟಪ ಉದ್ಘಾಟನಾ ವೇದಿಕೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ಮಾತಿನ ಜಟಾಪಟಿ ನಡೆಯಿತು.

ಶಾಸಕ ಬೈರತಿ ಸುರೇಶ ಮಾತನಾಡುವಾಗ ಮುಂದಿನ ಸಿಎಂ ಸಿದ್ದರಾಮಯ್ಯ ಅಗಬೇಕು. ಯಲಬುರ್ಗಾ ಕ್ಷೇತ್ರದಲ್ಲಿ ರಾಯರಡ್ಡಿ ಅಧಿಕಾರಕ್ಕೆ ಬರಲು ನೀವೆಲ್ಲ ಆರ್ಶೀವಾದ ಮಾಡಬೇಕು. ಹೆಸರು ಬಳಸದೇ ಈಗಿನ ಶಾಸಕರು (ಹಾಲಪ್ಪ ಆಚಾರ್) ಎನಾದರೂ ಅಭಿವೃದ್ಧಿ ‌ಕೆಲಸ ಮಾಡಿದ್ದಾರೆಯೇ? ಎಂದು ಪ್ರಶ್ನಿಸಿದರು.

ಈ ಮಾತಿಗೆ ತಗಾದೆ ತಗೆದ ಬಿಜೆಪಿಯ ಮುಖಂಡರಾದ ಕಳಕಪ್ಪ ಕಂಬಳಿ, ಬಸಲಿಂಗಪ್ಪ ಭೂತೆ ಸೇರಿದಂತೆ ಕೆಲವರು ಬೈರತಿ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿ ಮಾತು ನಿಲ್ಲಿಸುವಂತೆ ಆಗ್ರಹಿಸಿದರು.

ADVERTISEMENT

ಇದು, ಧಾರ್ಮಿಕ ಕಾರ್ಯಕ್ರಮ, ಇಲ್ಲಿ ರಾಜಕೀಯ ಮಾತನಾಡುವುದು ತರವಲ್ಲ ಎಂದರು. ಈ ವೇಳೆ ಬಿಜೆಪಿಯ ಮುಖಂಡ ಶೇಖರ ಗುರಾಣಿ ಎನ್ನುವವರು ಬೈರತಿ ಸುರೇಶ್ ಗೆ ಮಾತು ನಿಲ್ಲಿಸುವಂತೆ ಜೋರು ಮಾಡಿದರು.

ಈ ಧಾರ್ಮಿಕ ಕಾರ್ಯಕ್ರಮಕ್ಕೆ ಬಿಜೆಪಿ ಮುಖಂಡರೂ ಆರ್ಥಿಕ ನೆರವು ನೀಡಿದ್ದಾರೆ. ಇದು ರಾಜಕೀಯ ಕಾರ್ಯಕ್ರಮವಲ್ಲ ಎಂದು ಗುರಾಣಿ ಅವರು ಬೈರತಿಯನ್ನು ತಳ್ಳಿದರು.

ಇದರಿಂದ ಕೆಂಡಮಂಡಲವಾದ ಬೈರತಿ ಎಲ್ಲರಿಗೂ ಧನ್ಯವಾದ ಹೇಳಿ, ತಮ್ಮನ್ನು ತಳ್ಳಿದವರನ್ನು ಹುಡುಕಲು ಯತ್ನಿಸಿದರು. ಆದರೆ, ತಳ್ಳಿದ ವ್ಯಕ್ತಿ ಕಾಣಲಿಲ್ಲ. ಕೊನೆಗೆ ಶಾಸಕ ರಾಘವೇಂದ್ರ ಹಿಟ್ನಾಳ್, ಮಾಜಿ ಶಾಸಕ ಬಸವರಾಜ ರಾಯರಡ್ಡಿ ಸೇರಿದಂತೆ ಇತರರು ಸಮಾಧಾನ ಪಡಿಸಿದರು.

ಬಳಿಕ ಮಾತನಾಡಿದ ಬಸವರಾಜ ರಾಯರಡ್ಡಿ, ಬೈರತಿ ಸುರೇಶ್ ಪ್ರೀತಿಗಾಗಿ ಮಾತನಾಡಿದ್ದನ್ನು ಯಾರೂ ತಪ್ಪಾಗಿ ಅರ್ಥೈಸಬಾರದು.
ನಾನು ಸಾಕಷ್ಟು ರಾಜಕೀಯ ‌ನೋಡಿದ್ದೇನೆ. ಮಾತನಾಡಲು ಸಾಕಷ್ಟಿದೆ. ಆದರೆ, ಧಾರ್ಮಿಕ ಕಾರ್ಯಕ್ರಮದಲ್ಲಿ
ಕೀಳು ಮಟ್ಟದ ರಾಜಕೀಯ ಮಾಡಲು ಹೋಗಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.