ಬೆಂಗಳೂರು: ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜನ್ನು (ಯುವಿಸಿಇ) ಮೇಲ್ದರ್ಜೆಗೇರಿಸಲು ಮಂಜೂರಾದ ₹25 ಕೋಟಿ ಬಳಕೆಗೆ ಸರ್ಕಾರ ಅನುಮೋದನೆ ನೀಡಿದೆ.
ಯುವಿಸಿಇಗೆ 2023ರಲ್ಲಿ ವಿಶ್ವವಿದ್ಯಾಲಯದ ಸ್ಥಾನ ನೀಡಲಾಗಿತ್ತು. ಐಐಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು 2023-24ರ ಬಜೆಟ್‌ನಲ್ಲಿ ₹25 ಕೋಟಿ ಮೀಸಲಿಡಲಾಗಿತ್ತು. ಆದರೆ, ಹಣ ಬಳಕೆಗೆ ಸಲ್ಲಿಸಿದ್ದ ಪ್ರಸ್ತಾವ ಎರಡು ಬಾರಿ ತಿರಸ್ಕೃತಗೊಂಡಿತ್ತು. ಮತ್ತೆ ಮೂರನೇ ಬಾರಿ ಪ್ರಸ್ತಾವ ಸಲ್ಲಿಸಲಾಗಿತ್ತು.
‘ಮಾರ್ಚ್ 2024ರ ಮೊದಲು ಯುವಿಸಿಇ ಹಣ ಬಳಸಿಕೊಳ್ಳಬೇಕಿದೆ. ಮುಂಬೈನ ಐಐಟಿಯಲ್ಲಿ ಪ್ರಾಧ್ಯಾಪಕರಾಗಿರುವ ಡಿ ಮಂಜುನಾಥ್ ಅವರನ್ನು ನಿರ್ದೇಶಕರನ್ನಾಗಿ ನೇಮಿಸಲಾಗಿದೆ. ನಿಯೋಜಿತ ನಿರ್ದೇಶಕರು ಕರ್ತವ್ಯಕ್ಕೆ ವರದಿ ಮಾಡಲು ಸಮಯವನ್ನು ಕೋರಿದ್ದಾರೆ. ಯುವಿಸಿಇ ಆಡಳಿತ ಮಂಡಳಿ ಅವರಿಗೆ 40 ದಿನಗಳ ಹೆಚ್ಚುವರಿ ಸಮಯ ನೀಡಲು ಒಪ್ಪಿಕೊಂಡಿದೆ. ಅವರ ವಿಳಂಬದಿಂದಾಗಿ ಅಭಿವೃದ್ಧಿ ಚಟುವಟಿಕೆಗಳಿಗೆ ಅಡ್ಡಿಯಾಗುತ್ತಿದೆ’ ಎಂದು ಯುವಿಸಿಇ ಅಧ್ಯಾಪಕರು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.