ADVERTISEMENT

ಜಾಫರ್‌ ಷರೀಫ್‌ ಕುಟುಂಬಸ್ಥರನ್ನು ಭೇಟಿ ಮಾಡಿದ ಕೇಂದ್ರ ಸಚಿವ ಅರುಣ್‌ ಜೇಟ್ಲಿ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2018, 13:29 IST
Last Updated 29 ನವೆಂಬರ್ 2018, 13:29 IST
ಜಾಫರ್ ಷರೀಫ್‌ ಕುಟುಂಬಸ್ಥರನ್ನು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಗುರುವಾರ ಭೇಟಿ ಮಾಡಿದರು. ಚಿತ್ರ: ಎಎನ್‌ಐ ಟ್ವೀಟ್
ಜಾಫರ್ ಷರೀಫ್‌ ಕುಟುಂಬಸ್ಥರನ್ನು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಗುರುವಾರ ಭೇಟಿ ಮಾಡಿದರು. ಚಿತ್ರ: ಎಎನ್‌ಐ ಟ್ವೀಟ್   

ಬೆಂಗಳೂರು: ಹಿರಿಯ ಕಾಂಗ್ರೆಸಿಗ, ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್‌ ಷರೀಫ್ ಅವರ ಕುಟುಂಬಸ್ಥರನ್ನು ಇಲ್ಲಿನ ಅವರ ನಿವಾಸದಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಗುರುವಾರ ಬೇಟಿ ಮಾಡಿದ್ದಾರೆ.

ಜಾಫರ್‌ ಷರೀಫ್‌ ಅವರು ಅನಾರೋಗ್ಯದಿಂದ ಭಾನುವಾರ(ನ.25) ನಿಧನರಾಗಿದ್ದಾರೆ.

ಕುಟುಂಬದ ಸದಸ್ಯರ ಜತೆ ಕೆಲ ಹೊತ್ತು ಮಾತನಾಡಿದ ಅರುಣ್‌ ಜೇಟ್ಲಿ ಸಾಂತ್ವನ ಹೇಳಿದ್ದಾರೆ.

ADVERTISEMENT

ಜಾಫರ್‌ ಷರೀಫ್‌ ಅವರು ಇದೇ 23ರ ಶುಕ್ರವಾರ ನಮಾಜ್‌ ಮಾಡುವ ಸಂದರ್ಭ ಅವರು ಹೃದಯಾಘಾತಕ್ಕೆ ಒಳಗಾಗಿ ಕುಸಿದುಬಿದ್ದರು. ಅವರನ್ನು ಫೋರ್ಟಿಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭಾನುವಾರ ಮಧ್ಯಾಹ್ನ 12.30ಕ್ಕೆ ಅವರು ಕೊನೆಯುಸಿರೆಳೆದಿದ್ದರು.

ಷರೀಫ್‌ ಅವರ ಪತ್ನಿ ಅಮೀನಬಿ ಮತ್ತು ಹಿರಿಯ ಪುತ್ರ ಅಬ್ದುಲ್ ಕರೀಮ್‌, ಕಿರಿಯ ಪುತ್ರ ಖಾದರ್‌ ನವಾಜ್‌ ಷರೀಫ್‌ ಈ ಹಿಂದೆಯೇ ನಿಧನರಾಗಿದ್ದಾರೆ. ಷರೀಫ್‌ ಅವರಿಗೆ ಇಬ್ಬರು ಪುತ್ರಿಯರಿದ್ದಾರೆ. ಇಬ್ಬರು ಮೊಮ್ಮಕ್ಕಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.