ಬೆಂಗಳೂರು: ಬ್ರಹ್ಮಾಂಡದ ಉಗಮದ ಹಂತದಲ್ಲಿ ಹುಟ್ಟಿದ ಮೊದಲ ನಕ್ಷತ್ರಗಳು ಮತ್ತು ಆಕಾಶಗಂಗೆಗಳ ಸ್ವರೂಪಗಳ ಬಗ್ಗೆ ‘ಸರಾಸ್–3’ (ಎಸ್ಎಆರ್‌ಎಎಸ್–3) ರೇಡಿಯೊ ದೂರದರ್ಶಕ ಸುಳಿವು ನೀಡಿದೆ ಎಂದು ರಾಮನ್ ಸಂಶೋಧನಾ ಸಂಸ್ಥೆ ತಿಳಿಸಿದೆ.
ದೇಶೀಯವಾಗಿ ಅಭಿವೃದ್ಧಿಪಡಿಸಿದ, ರಾಮನ್ ಸಂಶೋಧನಾ ಸಂಸ್ಥೆಯಲ್ಲಿ ನಿರ್ಮಿಸಿದ ‘ಸರಾಸ್–3’ ರೇಡಿಯೊ ದೂರದರ್ಶಕವನ್ನು ದಂಡಿಗಾನಹಳ್ಳಿ ಕೆರೆ ಮತ್ತು ಶರಾವತಿ ಹಿನ್ನೀರಿನಲ್ಲಿ 2020ರಲ್ಲಿ ಅಳವಡಿಸಲಾಗಿತ್ತು. ಈ ದೂರದರ್ಶಕ ಮೂಲಕ 20 ಕೋಟಿ ವರ್ಷಗಳ ಹಿಂದೆ ‘ಮಹಾಸ್ಫೋಟದಿಂದಾಗಿ (ಬಿಗ್ ಬ್ಯಾಂಗ್) ಬ್ರಹ್ಮಾಂಡದ ಉಗಮದ ಸಂದರ್ಭದ ವಿದ್ಯಮಾನ, ಆ ಬಳಿಕ ಹುಟ್ಟಿದ ನಕ್ಷತ್ರಗಳು ಮತ್ತು ಸೃಷ್ಟಿಯಾದ ಆಕಾಶಗಂಗೆಗಳ ಸ್ವರೂಪಗಳ ಬಗ್ಗೆ ವಿಜ್ಞಾನಿಗಳು ಅಧ್ಯಯನ ನಡೆಸಿದ್ದಾರೆ.
ಸಂಸ್ಥೆಯ ಸಂಶೋಧಕರಾದ ಸೌರಭ ಸಿಂಗ್ ಮತ್ತು ಆಸ್ಟ್ರೇಲಿಯಾದ ಕಾಮನ್‌ವೆಲ್ತ್ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಂಸ್ಥೆಯ (ಸಿಎಸ್‌ಐಆರ್‌ಒ) ರವಿ ಸುಬ್ರಹ್ಮಣ್ಯ ಅವರು ಸಾರ್ಸ್–3ದಿಂದ ದೊರೆತ ಮಾಹಿತಿಯನ್ನು ವಿಶ್ಲೇಷಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.