ಬೆಂಗಳೂರು: ಕೇಂದ್ರ ಸರ್ಕಾರದ ಆಹಾರ ನಿಗಮವು ಅಕ್ಕಿಕೊಡುತ್ತೇವೆಂದು ಭರವಸೆ ನೀಡಿತ್ತು. ಬಳಿಕ, ಆಗಲ್ಲವೆಂದು ತೀರ್ಮಾನಿಸಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದ್ದಾರೆ.
ಅಕ್ಕಿ ಖರೀದಿ ಕುರಿತಂತೆ ಆಂಧ್ರಪ್ರದೇಶ, ತೆಲಂಗಾಣ, ಛತ್ತೀಸ ಗಡ ಸಿಎಂಗಳ ಜತೆ ನಮ್ಮ ಸಿಎಂ ಸಂಪರ್ಕದಲ್ಲಿದ್ದಾರೆ. ಇವತ್ತು ಅಧಿಕಾರಿಗಳು ತೆಲಂಗಾಣಕ್ಕೆ ಹೋಗುತ್ತಿದ್ದಾರೆ.
ನಾವು ಕೇಂದ್ರವನ್ನು ಉಚಿತವಾಗಿ ಅಕ್ಕಿ ಕೇಳಿರಲಿಲ್ಲ. ಅವರು ಕೇಳಿದ ಹಣ ಕೊಡಲು ಸಿದ್ಧರಿದ್ದೇವೆ. ಅವರಲ್ಲಿ ಏಳು ಲಕ್ಷ ಟನ್ ಆಹಾರ ಸ್ಟಾಕ್ ಇದ್ದರೂ ಕೊಡದೇ ರಾಜಕಾರಣ ಮಾಡಿದ್ದಾರೆ. ಕೇಂದ್ರದವರು ಟೆಂಡರ್ ಮಾಡುವ ಕಾರ್ಯಕ್ರಮ ಮಾಡಿಕೊಂಡಿದ್ದಾರೆ. ಕೇಂದ್ರ ರಾಜಕೀಯ ಉದ್ದೇಶದಿಂದ ತೀರ್ಮಾನ ಮಾಡಿದೆ. ಬಡವರಿಗೆ ಊಟ ಕೊಡುವ ವಿಚಾರದಲ್ಲಿ ರಾಜಕೀಯ ಮಾಡಿರುವುದನ್ನು ಖಂಡಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಯುಪಿಎ ಇದ್ದಾಗ ಸಾರ್ವಜನಿಕರ, ಬಡವರ ಕಾರ್ಯಕ್ರಮದಲ್ಲಿ ತಾರತಮ್ಯ ಮಾಡಿರಲಿಲ್ಲ. ನಾವು ಗ್ಯಾರೆಂಟಿಯಲ್ಲಿ ಹತ್ತು ಕೆಜಿ ಅಕ್ಕಿ ಕೊಡುತ್ತೇವೆಂದು ಹೇಳಿದ್ದೆವು, ಪಕ್ಕದ ರಾಜ್ಯದ ಅಕ್ಕಿ ತಂದು ಜನರಿಗೆ ಕೊಟ್ಟು ಮಾತು ಉಳಿಸಿಕೊಳ್ಳುತ್ತೇವೆ. ಅಕ್ಕಿ ಖರೀದಿಗೆ ಓಪನ್ ಮಾರ್ಕೆಟ್‌ಗೆ ಹೋಗಲ್ಲ. ನೆರೆ ರಾಜ್ಯಗಳಿಂದ ಅಕ್ಕಿ ತರಲು ನಿರ್ಧರಿಸಲಾಗಿದೆ. ಕಾರ್ಯದರ್ಶಿಗಳು, ಅಧಿಕಾರಿಗಳು ಕಾರ್ಯೋನ್ಮುಖ ಆಗಿದ್ದಾರೆ. ಹೆಚ್ಚುವರಿ ಹೊರೆ ಬೀಳದಂತೆ ಪ್ರಯತ್ನ ಮಾಡಲಾಗುತ್ತಿದೆ. ಆದಷ್ಟು ಸಮಯಕ್ಕೆ ಸರಿಯಾಗಿ ಅನುಷ್ಠಾನ ಮಾಡುತ್ತೇವೆ. ವಿಳಂಬ ಆಗದಂತೆ ತಡೆಯಲು ಸಂಪುಟದಲ್ಲಿ ಚರ್ಚೆ ನಡೆಸಲಾಗಿದೆ ಎಂದು ಮುನಿಯಪ್ಪ ಹೇಳಿದರು.
ಅಕ್ಕಿಯನ್ನು ತೆಲಂಗಾಣದಿಂದ ಪಡೆದರೆ ವೆಚ್ಚ ಕಡಿಮೆಯಾಗುತ್ತದೆ, ಛತ್ತೀಸ್‌ಗಡದಿಂದ ತರಿಸುವುದಾದರೆ ವೆಚ್ಚ ಹೆಚ್ಚಾಗಲಿದೆ ಎಂದು ಅವರು ಹೇಳಿದರು.
ಇವುಗಳನ್ನೂ ಓದಿ..
ಮತಾಂತರ ನಿಷೇಧ ಕಾಯ್ದೆ, ಎಪಿಎಂಸಿ ಕಾಯ್ದೆಗಳನ್ನು ರದ್ದು: ಸಚಿವ ಸಂಪುಟ ಸಭೆ ನಿರ್ಧಾರ
ಸಾವರ್ಕರ್, ಹೆಡಗೇವಾರ್ ಪಠ್ಯಗಳಿಗೆ ಕೊಕ್: ನೆಹರೂ, ಅಂಬೇಡ್ಕರ್ ಪಠ್ಯ ಸೇರ್ಪಡೆ
ಶಾಲೆ, ಕಾಲೇಜುಗಳಲ್ಲಿ ಪ್ರತಿದಿನ ಸಂವಿಧಾನದ ಪೀಠಿಕೆ ಓದುವುದು ಕಡ್ಡಾಯ: ಸಂಪುಟ ತೀರ್ಮಾನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.