ADVERTISEMENT

Video: ಲೋಕಲ್‌ ಬೇಡ, ಬ್ರ್ಯಾಂಡೆಡ್‌ ಟೀ ಪೌಡರ್‌ ತರಿಸಿ!: ಸಿಎಂ ಜೊತೆಗಿದ್ದ ಆಹಾರ ಅಧಿಕಾರಿಗಳ ಜೋರು

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2022, 16:26 IST
Last Updated 12 ಅಕ್ಟೋಬರ್ 2022, 16:26 IST

ರಾಜ್ಯದಲ್ಲಿ ಬಿಜೆಪಿಯಿಂದ ಜನಸ್ಪಂದನ ಯಾತ್ರೆ ನಡೆಯುತ್ತಿದೆ. ಈ, ಕಾರ್ಯಕ್ರಮದ ನಡುವೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ, ಹೊಸಪೇಟೆ ತಾಲ್ಲೂಕಿನ ಕಮಲಾಪುರದಲ್ಲಿ ಪರಿಶಿಷ್ಟ ಜಾತಿಯ ಹಿರಾಳ್ ಕೊಲ್ಲಾರಪ್ಪ ಅವರ ಮನೆಗೆ ಭೇಟಿ ನೀಡಿದರು. ಅವರ ಮನೆಯಲ್ಲಿಟ್ಟಿದ್ದ ಚಹಾ ಪುಡಿಯನ್ನು ಗಮನಿಸಿದ ಆಹಾರ ಅಧಿಕಾರಿಗಳು, ಇದು ಬಳಸುವುದು ಬೇಡ. ಬ್ರೂಕ್‌ ಬಾಂಡ್‌, ರೆಡ್‌ ಲೇಬಲ್‌, ಕಣ್ಣನ್‌ ದೇವನ್‌ ಯಾವ ಬ್ರ್ಯಾಡೆಂಡ್‌ ಕಂಪನಿಯದ್ದು ಸಿಗುತ್ತೋ ಅದನ್ನು ತರಿಸಿ ಟೀ ಮಾಡಿ. ಲೋಕಲ್‌ ಟೀ ಪೌಡರ್‌ ಸರಿಯಾಗಿದೆಯೋ ಇಲ್ಲವೋ ಅನುಮಾನ ಬರುತ್ತಿದೆ’ ಎಂದು ಹೇಳಿದರು. ನಂತರ ರೆಡ್‌ ಲೇಬಲ್‌ ಟೀ ಪೌಡರ್‌ ತರಿಸಿ ಚಹಾ ಮಾಡಿಕೊಟ್ಟೆವು ಎಂದು ಕುಟುಂಬದ ಮಹಿಳೆಯರು ಹೇಳಿದರು.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT