ADVERTISEMENT

ಸಚಿವ ಸಂಪುಟ | ಎರಡನೇ ಬಾರಿಗೆ ಡಾ.ಶರಣಪ್ರಕಾಶ ‌ಪಾಟೀಲಗೆ ಸಚಿವ ಸ್ಥಾನ

​ಪ್ರಜಾವಾಣಿ ವಾರ್ತೆ
Published 27 ಮೇ 2023, 7:41 IST
Last Updated 27 ಮೇ 2023, 7:41 IST
ಡಾ.ಶರಣಪ್ರಕಾಶ ‌ಪಾಟೀಲ
ಡಾ.ಶರಣಪ್ರಕಾಶ ‌ಪಾಟೀಲ   

ಕಲಬುರಗಿ: ಸೇಡಂ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿರುವ ಡಾ. ಶರಣಪ್ರಕಾಶ ‌ಪಾಟೀಲ ಅವರಿಗೆ ‌ಎರಡನೇ ಬಾರಿಗೆ ಸಚಿವ ಸ್ಥಾನ ಹುಡುಕಿಕೊಂಡು ಬಂದಿದೆ.

ಜಿಲ್ಲೆಯ ಒಂಬತ್ತು ವಿಧಾನಸಭಾ ಕ್ಷೇತ್ರಗಳ ಪೈಕಿ ಸೇಡಂ ಕ್ಷೇತ್ರದಿಂದ ಡಾ. ಶರಣಪ್ರಕಾಶ ಅವರು ದಾಖಲೆಯ 43 ಸಾವಿರ ಮತಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದ್ದಾರೆ.

2013ರಿಂದ 2018ರ ಅವಧಿಯಲ್ಲಿ ಸಿದ್ದರಾಮಯ್ಯ ಸಂಪುಟದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದ ಅವಧಿಯಲ್ಲಿ ರಾಜ್ಯದ ಸರ್ಕಾರಿ ವೈದ್ಯಕೀಯ ‌ಕಾಲೇಜುಗಳಿಗೆ ಮೂಲಸೌಕರ್ಯಗಳನ್ನು ಕಲ್ಪಿಸಿದ್ದರು.

ADVERTISEMENT

ತವರು ಜಿಲ್ಲೆ ಕಲಬುರಗಿಯಲ್ಲಿ ಗುಲಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜಿಮ್ಸ್)ಗೆ ನೂತನ ಕಾಲೇಜು ಕಟ್ಟಡವನ್ನು ನಿರ್ಮಿಸಿದರು.

ಜಯದೇವ ಹೃದ್ರೋಗ ಆಸ್ಪತ್ರೆಯ ಶಾಖೆಯನ್ನು ಕಲಬುರಗಿಯಲ್ಲಿ ಸ್ಥಾಪಿಸಿದರು. ಇದೀಗ ₹ 160 ಕೋಟಿ ವೆಚ್ಚದಲ್ಲಿ ಕೆಕೆಆರ್ ಡಿಬಿ ಅನುದಾನದಲ್ಲಿ 300 ಹಾಸಿಗೆಯ ಆಸ್ಪತ್ರೆಯ ಕಟ್ಟಡ ನಿರ್ಮಾಣವಾಗುತ್ತಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆಪ್ತರಾಗಿರುವ ಡಾ. ಶರಣಪ್ರಕಾಶ ಅವರು ಕೆಪಿಸಿಸಿ ರಾಜ್ಯ ಉಪಾಧ್ಯಕ್ಷರೂ ಆಗಿದ್ದಾರೆ. ಇವರು ಸೇಡಂ ತಾಲ್ಲೂಕಿನ ಉಡಗಿ ಗ್ರಾಮದವರು.

ಕಿರು ಪರಿಚಯ

ಹೆಸರು : ಡಾ.ಶರಣಪ್ರಕಾಶ ಪಾಟೀಲ

ಮತಕ್ಷೇತ್ರ : ಸೇಡಂ

ಪಕ್ಷ : ಕಾಂಗ್ರೆಸ್

ವಯಸ್ಸು : 55

ವಿದ್ಯಾರ್ಹತೆ : ಎಂಬಿಬಿಎಸ್ ಎಂ.ಡಿ ಪತ್ನಿ: ಡಾ.ಭಾಗ್ಯಶ್ರೀ ಪಾಟೀಲ

ಜಾತಿ : ಲಿಂಗಾಯತ

ಎಷ್ಟನೇ ಬಾರಿ ಶಾಸಕ : 4ನೇ ಬಾರಿ

ಹಿಂದೆ ನಿರ್ವಹಿಸಿದ್ದ ಖಾತೆ : ವೈದ್ಯಕೀಯ ಶಿಕ್ಷಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.