ADVERTISEMENT

ಅರಣ್ಯ ಒತ್ತುವರಿ: ಅರಣ್ಯ ಅತಿಕ್ರಮಣ ಪ್ರಕರಣಗಳ ಬಗ್ಗೆ ಇಂದು ಸಭೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2024, 4:21 IST
Last Updated 26 ಜೂನ್ 2024, 4:21 IST
<div class="paragraphs"><p>ಅರಣ್ಯ</p></div>

ಅರಣ್ಯ

   

ಬೆಂಗಳೂರು: ಕರ್ನಾಟಕ ಅರಣ್ಯ ಇಲಾಖೆಯ 2023-24ರ ಮಧ್ಯಂತರ ವಾರ್ಷಿಕ ವರದಿ ಪ್ರಕಾರ ಕೇವಲ ಒಂಭತ್ತು ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ 716 ಹೊಸ ಅರಣ್ಯ ಅತಿಕ್ರಮಣ ಪ್ರಕರಣಗಳು ದಾಖಲಾಗಿವೆ.

ಈ ಕುರಿತಂತೆ ಬುಧವಾರ ಸಭೆ ನಡೆಯಲಿದೆ. 

ADVERTISEMENT

142 ಹೊಸ ಒತ್ತುವರಿ ಪ್ರಕರಣಗಳೊಂದಿಗೆ ಶಿವಮೊಗ್ಗ ವೃತ್ತ ಮೊದಲ ಸ್ಥಾನದಲ್ಲಿದ್ದರೆ, 128 ಹೊಸ ಒತ್ತುವರಿ ಪ್ರಕರಣಗಳೊಂದಿಗೆ ಬೆಳಗಾವಿ ಅರಣ್ಯ ವೃತ್ತ ಎರಡನೇ ಸ್ಥಾನದಲ್ಲಿದೆ.

2022-23 ವಾರ್ಷಿಕ ವರದಿ ಪ್ರಕಾರ ಬೆಳಗಾವಿ ಅರಣ್ಯ ವೃತ್ತದಲ್ಲಿ 110 ಹೊಸ ಅರಣ್ಯ ಒತ್ತುವರಿ ಪ್ರಕರಣಗಳು ದಾಖಲಾಗಿವೆ.

ಹಲವಾರು ವೃತ್ತಗಳ ಸಿಎಫ್, ಸಿಸಿಎಫ್‌ಗಳು ಹೊಸ ಒತ್ತುವರಿ ಪ್ರಕರಣಗಳು ಜರುಗದಂತೆ ತಡೆಗಟ್ಟಲು ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ. ಹೀಗಿದ್ದರೂ ಸಹ ಇಂತಹ ಅಧಿಕಾರಿಗಳನ್ನು ಎರಡು ವರ್ಷ ಕಳೆದರೂ ಸಹ ಇದೆ ಜಾಗದಲ್ಲಿ ಮುಂದುವರೆಸಲಾಗಿದೆ. ಇಂತಹ ಸಿಸಿಎಫ್‌ಗಳನ್ನು ತಕ್ಷಣವೇ ಅಮಾನತು ಮಾಡಬೇಕು ಹಾಗೂ ಒತ್ತುವರಿ ತೆರವಿಗೆ ಕ್ರಮವಹಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಅವರು ಅರಣ್ಯ ಸಚಿವರನ್ನು ಒತ್ತಾಯಿಸಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.