ಬೆಂಗಳೂರು: ದೇಶದಲ್ಲಿ ಕೋವಿಡ್–19 ನಿಯಂತ್ರಿಸುವ ಕುರಿತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಮುಖೇನ ಸಲಹೆ ನೀಡಿದ್ದಾರೆ.
ಈ ಕುರಿತು ಎಚ್.ಡಿ.ದೇವೇಗೌಡ ಸೋಮವಾರ ಟ್ವೀಟಿಸಿದ್ದು, 'ಕೋವಿಡ್ ಸಾಂಕ್ರಾಮಿಕವನ್ನು ನಿಯಂತ್ರಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೆಲವು ಸಲಹೆಗಳನ್ನು ಒಳಗೊಂಡ ಪತ್ರವನ್ನು ನಿನ್ನೆ ಬರೆದಿದ್ದೇನೆ. ಇದು ರಾಷ್ಟ್ರೀಯ ಬಿಕ್ಕಟ್ಟಾಗಿದೆ, ನಾವೆಲ್ಲರೂ ಇದನ್ನು ಒಂದು ರಾಷ್ಟ್ರವಾಗಿ ಎದುರಿಸಬೇಕಿದೆ. ಜೀವ ಉಳಿಸಲು ಮತ್ತು ಸಂಕಟವನ್ನು ತಪ್ಪಿಸುವ ಕುರಿತಾದ ಎಲ್ಲ ಸೂಕ್ತ ಕ್ರಮಗಳನ್ನು ನಾವು ಬೆಂಬಲಿಸಬೇಕಿದೆ' ಎಂದಿದ್ದಾರೆ.
'ದೇಶದ ಎಲ್ಲ ನಾಗರಿಕರಿಗೂ ಉಚಿತವಾಗಿ ಕೋವಿಡ್ ಲಸಿಕೆ ನೀಡಲು ಸರ್ಕಾರವೇನಾದರೂ ನಿರ್ಧರಿಸಿದರೆ, ಅದು ಅತ್ಯುತ್ತಮ ಮಾನವೀಯ ನಡೆಯಾಗಿದೆ' ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.