ಮೈಸೂರು: ಕನ್ನಡ ಮಾಧ್ಯಮದಲ್ಲಿ ಪಿಯುಸಿ ವಿಜ್ಞಾನ ಮತ್ತು ವಾಣಿಜ್ಯ ವಿಷಯಗಳನ್ನು ಬೋಧಿಸುತ್ತಿರುವ ರಾಜ್ಯದ ಏಕೈಕ ಕಾಲೇಜಾದ, ಇಲ್ಲಿನ ನೃಪತುಂಗ ಪದವಿಪೂರ್ವ ಕಾಲೇಜಿನಲ್ಲಿ ವಿಜ್ಞಾನ ಶಿಕ್ಷಣವನ್ನು ಎರಡು ವರ್ಷ ಸಂಪೂರ್ಣ ಉಚಿತವಾಗಿ ನೀಡಲಾಗುತ್ತಿದೆ. ವಸತಿ ಸೌಲಭ್ಯವೂ ಉಚಿತ.
ಪ್ರಸಕ್ತ ಸಾಲಿನಲ್ಲಿ ಪಿಸಿಎಂಬಿ (ಭೌತವಿಜ್ಞಾನ, ರಸಾಯನವಿಜ್ಞಾನ,, ಜೀವವಿಜ್ಞಾನ, ಗಣಿತ) ಮತ್ತು ಪಿಸಿಎಂಸಿಎಸ್ (ಭೌತವಿಜ್ಞಾನ,, ರಸಾಯನ ವಿಜ್ಞಾನ, ಗಣಿತ ಹಾಗೂ ಕಂಪ್ಯೂಟರ್ ವಿಜ್ಞಾನ) ಐಚ್ಛಿಕ ವಿಷಯಗಳು ಲಭ್ಯ.
‘ವಾಣಿಜ್ಯ ವಿಭಾಗಕ್ಕೆ ಕೈಗೆಟಕುವ ಶುಲ್ಕ ನಿಗದಿ ಮಾಡಲಾಗಿದ್ದು, ಐಚ್ಛಿಕ ವಿಷಯಗಳಲ್ಲಿ ಕಂಪ್ಯೂಟರ್ ವಿಜ್ಞಾನದ ಕಲಿಕೆ ಕಡ್ಡಾಯ’ ಎಂದು ಕನ್ನಡ ವಿಕಾಸ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಸಂಸ್ಥೆಯ ಉಪಾಧ್ಯಕ್ಷ ಸ.ರ. ಸುದರ್ಶನ ತಿಳಿಸಿದ್ದಾರೆ.
‘ನೀಟ್ ಮತ್ತು ಸಿಇಟಿ ಪರೀಕ್ಷೆಗಳಲ್ಲಿ ಕನ್ನಡದಲ್ಲಿ ಉತ್ತರಿಸಲು ಅವಕಾಶ ಸಿಕ್ಕಿದ್ದು, ರಾಜ್ಯದಾದ್ಯಂತ ಗ್ರಾಮೀಣ ವಿದ್ಯಾರ್ಥಿಗಳು ಜೂನ್ 3ರ ಒಳನೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು’ ಎಂದು ಹೇಳಿದ್ದಾರೆ.
ಅರ್ಜಿ ಸಲ್ಲಿಸಲು: kannadavikas1989@gmail.com ಹೆಚ್ಚಿನ ವಿವರಕ್ಕೆ:63667 09737.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.