ADVERTISEMENT

ಮಕ್ಕಳಿಗಾಗಿ ಉಚಿತ ಟೆಲಿ ಕೌನ್ಸಿಲಿಂಗ್

​ಪ್ರಜಾವಾಣಿ ವಾರ್ತೆ
Published 7 ಮೇ 2021, 12:24 IST
Last Updated 7 ಮೇ 2021, 12:24 IST

ಬೆಂಗಳೂರು:ಆಪ್ತ ಸಮಾಲೋಚನೆ ಅಗತ್ಯವಿರುವ ಎಲ್ಲಾ ಮಕ್ಕಳಿಗಾಗಿ 'ಉಚಿತ ಟೆಲಿ- ಕೌನ್ಸೆಲಿಂಗ್'ಸೌಲಭ್ಯವನ್ನು ನೀಡಲು ಟೋಲ್ ಫ್ರೀ ಸಂಖ್ಯೆ:14499ನ್ನು ಸ್ಥಾಪಿಸಲಾಗಿದೆ.

ಆಪ್ತ ಸಮಾಲೋಚನೆ ಬಯಸುವ ಕರ್ನಾಟಕದಲ್ಲಿನ ಎಲ್ಲಾ ಮಕ್ಕಳು ಹಾಗೂ ಮಕ್ಕಳಿಗಾಗಿ ಮಕ್ಕಳ ಪೋಷಕರು ಸಹ 14499 ಸಂಖ್ಯೆಗೆ ಕರೆ ಮಾಡುವ ಮೂಲಕ ಮಕ್ಕಳಿಗೆ ಉಚಿತವಾಗಿ ಆಪ್ತ ಸಮಾಲೋಚನೆ ಸೌಲಭ್ಯ ಪಡೆಯಬಹುದು.

ಅಲ್ಲದೇ ರಾಷ್ಟ್ರದಾದ್ಯಂತ ಚಾಲ್ತಿಯಲ್ಲಿರುವ ಮಕ್ಕಳ ಸಹಾಯವಾಣಿ ಸೇವೆ: 1098 ಸಂಕಷ್ಟದಲ್ಲಿ ಸಿಲುಕಿರುವ/ರಕ್ಷಣೆ ಮತ್ತು ಪೋಷಣೆ ಅವಶ್ಯಕತೆ ಇರುವ ಮಕ್ಕಳಿಗೆ ತುರ್ತು ಸೇವೆ ಒದಗಿಸಲು ಈ ಸಂಖ್ಯೆಗೆ ಕರೆ ಮಾಡುವ ಮೂಲಕ ನೆರವು ಪಡೆಯಬಹುದು.

ADVERTISEMENT

ಈ ಪರಿಸ್ಥಿತಿಯಲ್ಲಿ ಸೂಕ್ತ ಹಾಗೂ ಸರಿಯಾದ ಸಲಹೆಗಳಿಗಾಗಿ ಮೇಲೆ ತಿಳಿಸಿರುವ ಸಂಖ್ಯೆಗಳಿಗೆ ಮಾತ್ರ ಕರೆ ಮಾಡುವಂತೆ ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.