ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅವರ ಫೋಟೊ ಗ್ಯಾಲರಿ
ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ (104) ಹೃದಯಾಘಾತದಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಬುಧವಾರ ಮಧ್ಯಾಹ್ನ ನಿಧನರಾದರು. ಇಳಿವಯಸ್ಸಿನಲ್ಲೂ ಚಟುವಟಿಕೆಯಿಂದ ಇದ್ದ ಅವರು ಹಲವು ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. ಅವರಕೆಲವುಚಿತ್ರಗಳು ಇಲ್ಲಿವೆ.
ಪ್ರಜಾವಾಣಿ ವಾರ್ತೆ
Published 26 ಮೇ 2021, 10:14 IST
Last Updated 26 ಮೇ 2021, 10:14 IST
'ಕಲಾಬಂದು ಫೌಂಡೇಷನ್' ಆಯೋಜಿಸಿದ್ದ ಡಾ.ಎಚ್.ಎಸ್ ದೊರೆಸ್ವಾಮಿ ಅವರ ಜೀವಿತ ಸಾಧನೆ ಕುರಿತಾದ ಸಾಕ್ಷ್ಯಚಿತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್ ದೊರೆಸ್ವಾಮಿ ಮತ್ತು ಹಾವೇರಿಯ ಅಕ್ಕಿ ಮಠದ ಮ.ನಿ.ಪ್ರ ಗುರುಲಿಂಗ ಸ್ವಾಮಿಜಿ ಮಾತುಕತೆಯಲ್ಲಿ ತೊಡಗಿದ್ದರು. ರಾಜ್ಯಸಭಾ ಸದಸ್ಯ ಡಾ. ಎಲ್ ಹನುಮಂತಯ್ಯ ಇದ್ದರು - ಪ್ರಜಾವಾಣಿ ಚಿತ್ರ
ಡಾ.ಎಚ್.ಎಸ್ ದೊರೆಸ್ವಾಮಿ- ಪ್ರಜಾವಾಣಿ ಚಿತ್ರ
ಹಿರಿಯ ಸ್ವಾತಂತ್ರ್ಯ ಸೇನಾನಿ ಶ್ರೀ ಎಚ್ ಎಸ್ ದೊರೆಸ್ವಾಮಿ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ಸಮಿತಿಯ ಸದಸ್ಯರು ಎಚ್.ಎಸ್. ದೊರೆಸ್ವಾಮಿ ಮತ್ತು ಲಲಿತಮ್ಮ ದೊರೆಸ್ವಾಮಿ ಅವರಿಗೆ ಗೌರವಾರ್ಪಣೆ ಮಾಡಿದರು. ಪಾಟೀಲ್ ಪುಟ್ಟಪ್ಪ, ಇಂದೂದರ ಹೊನ್ನಾಪುರ, ಪ್ರಕಾಶ್ ರೈ, ಡಾ.ವಿಜಯಾ ಮತ್ತು ಇತರರು ಇದ್ದಾರೆ –ಪ್ರಜಾವಾಣಿ ಚಿತ್ರ
ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಹಾಗೂ ಅವರ ಪತ್ನಿ ಲಲಿತಮ್ಮ –ಪ್ರಜಾವಾಣಿ ಚಿತ್ರ/ಆನಂದ್ ಬಕ್ಷಿ
ಜಿಗ್ನೇಶ್ ಮೇವಾನಿ ಜೊತೆ ಎಚ್.ಎಸ್. ದೊರೆಸ್ವಾಮಿ–ಪ್ರಜಾವಾಣಿ ಚಿತ್ರ
ಎಂ.ಜಿ. ರಸ್ತೆಯ ಗಾಂಧೀಜಿ ಪ್ರತಿಮೆ ಬಳಿ ಪ್ರತಿಭಟನೆಯಲ್ಲಿ ಎಚ್.ಎಸ್. ದೊರೆಸ್ವಾಮಿ–ಪ್ರಜಾವಾಣಿ ಚಿತ್ರ
ಸಂವಿಧಾನದ ಉಳಿವಿಗಾಗಿ ಕರ್ನಾಟಕ ಸಂಘಟನೆ ಬೆಂಗಳೂರಿನಲ್ಲಿ ಆಯೋಜಿಸಿದ್ದ ಸಂಕಲ್ಪ ಸಮಾವೇಶದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಗುಜರಾತ್‍ನ ಶಾಸಕ ಜಿಗ್ನೇಶ್ ಮೇವಾನಿ ಮತ್ತಿತರರು –ಪ್ರಜಾವಾಣಿ ಚಿತ್ರ