ADVERTISEMENT

ಕಾಶ್ಮೀರಿ ವಿದ್ಯಾರ್ಥಿಗಳಿಗೆ ತೊಂದರೆ ನೀಡಬೇಡಿ: ಜಿ. ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2019, 10:49 IST
Last Updated 17 ಫೆಬ್ರುವರಿ 2019, 10:49 IST
   

ಬೆಂಗಳೂರು: ಶುಕ್ರವಾರ ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರ ದಾಳಿ ನಂತರ ದೇಶದಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಯತ್ತಿದೆ ಎಂಬ ಸುದ್ದಿ ಹಬ್ಬಿದೆ. ಆದರೆ ಇದು ಸುಳ್ಳು ಸುದ್ದಿ.ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ದುಷ್ಕರ್ಮಿಗಳು ಈ ರೀತಿಯ ಸುದ್ದಿ ಹಬ್ಬಿಸುತ್ತಿದ್ದು, ಸಿಆರ್‌ಪಿಎಫ್ ಸಹಾಯವಾಣಿ ಈ ಪ್ರಕರಣಗಳ ಬಗ್ಗೆ ಪರಿಶೀಲಿಸಿದಾಗ ಅದು ಸತ್ಯಕ್ಕೆ ದೂರವಾದದು ಎಂದು ತಿಳಿದು ಬಂದಿರುವುದಾಗಿ ಸಿಆರ್‌ಪಿಎಫ್ ಟ್ವೀಟ್ ಮಾಡಿದೆ.

ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸುವುದರಿಂದಾಲೀ ಅವರನ್ನು ಹೀಯಾಳಿಸುವುದರಿಂದಾಗಲೀ ಉಗ್ರ ದಾಳಿಗೆ ಪರಿಹಾರ ಸಿಗುವುದಿಲ್ಲ.ಈ ಹೊತ್ತಲ್ಲಿ ಎಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕು ಎಂದು ಕರ್ನಾಟಕದ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಕರೆ ನೀಡಿದ್ದಾರೆ.


ಈ ರೀತಿಯ ಸಂಕಷ್ಟದ ಸಮಯಲ್ಲಿ ನಾವೆಲ್ಲರೂ ಜತೆಯಾಗಿ ನಿಲ್ಲಬೇಕು. ಕಾಶ್ಮೀರಿ ವಿದ್ಯಾರ್ಥಿಗಳನ್ನು ಹೀಯಾಳಿಸುವುದು, ಹಲ್ಲೆ ನಡೆಸುವುದು ಯಾವುದಕ್ಕೂ ಪರಿಹಾರವಲ್ಲ.ಜಮ್ಮು ಕಾಶ್ಮೀರದ ವಿದ್ಯಾರ್ಥಿಗಳಿಗೆ ಏನಾದರೂ ಸಹಾಯ ಬೇಕಾದರೆ ಬೆಂಗಳೂರು ಪೊಲೀಸರನ್ನು ಸಂಪರ್ಕಸಿ ಎಂದು ಪರಮೇಶ್ವರ್ ಟ್ವೀಟಿಸಿದ್ದಾರೆ.

ADVERTISEMENT

ದೇಶದ ವಿವಿಧ ರಾಜ್ಯಗಳಲ್ಲಿರುವ ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆದರೆ ಅವರ ಸಹಾಯಕ್ಕಾಗಿ ಸಿಆರ್‌ಪಿಎಫ್ ಸಹಾಯವಾಣಿ ಆರಂಭಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.