ಬೆಂಗಳೂರು: ‘ಪುಣ್ಯಕೋಟಿ ದತ್ತು ಯೋಜನೆ’ಗೆ ದೇಣಿಗೆ ನೀಡುವ ಅಧಿಕಾರಿಗಳಿಗೆ ತೆರಿಗೆ ವಿನಾಯಿತಿ ಪಡೆಯಲು ಅವಕಾಶವಿದೆ ಎಂದು ಸರ್ಕಾರ ತಿಳಿಸಿದೆ.
ಆದಾಯ ತೆರಿಗೆ ಇಲಾಖೆಯಿಂದ ಪಡೆದಿರುವ ಫಾರ್ಮ್ ನಂಬರ್: 10ಎಸಿಯಂತೆ ಈ ಯೋಜನೆಗೆ ದೇಣಿಗೆ ನೀಡುವವರು ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 80ಜಿ ಅನ್ವಯ ತೆರಿಗೆ ವಿನಾಯಿತಿ ಪಡೆಯಬಹುದು ಎಂದಿದೆ.
ಗೋಶಾಲೆಯಲ್ಲಿ ಹಸುಗಳನ್ನು ಪೋಷಿ ಸಲು ನೌಕರರು, ನವೆಂಬರ್ ತಿಂಗಳ ವೇತನದಿಂದ ಒಂದು ಬಾರಿಗೆ ಸೀಮಿತವಾಗಿ ‘ಎ’ ವೃಂದದ ಅಧಿಕಾರಿ ಗಳು ₹ 11 ಸಾವಿರ, ‘ಬಿ’ ವೃಂದದ ಅಧಿಕಾರಿಗಳು ₹ 4 ಸಾವಿರ, ‘ಸಿ’ ವೃಂದದ ನೌಕರರು ₹ 400 ದೇಣಿಗೆ ನೀಡಬಹುದೆಂದು ಆದೇಶಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.