ADVERTISEMENT

ಖಾಸಗಿ ಆಸ್ಪತ್ರೆಗಳ ಬೇಡಿಕೆಗೆ ಮಣಿದ ಸರ್ಕಾರ: ಸಿ.ಟಿ. ಸ್ಕ್ಯಾನ್ ದರ ಏರಿಕೆ

​ಪ್ರಜಾವಾಣಿ ವಾರ್ತೆ
Published 8 ಮೇ 2021, 12:56 IST
Last Updated 8 ಮೇ 2021, 12:56 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ಖಾಸಗಿ ಆಸ್ಪತ್ರೆಗಳ ಬೇಡಿಕೆಗೆ ಮಣಿದಿರುವ ರಾಜ್ಯ ಸರ್ಕಾರ ಒಂದೇ ದಿನದಲ್ಲಿ ಸಿ.ಟಿ. ಸ್ಕ್ಯಾನ್ ದರ ಏರಿಕೆ ಮಾಡಿ ಹೊಸ ಆದೇಶ ಹೊರಡಿಸಿದೆ.

ಸಿ.ಟಿ. ಸ್ಯ್ಕಾನ್ ಗೆ ₹1500 ದರ ನಿಗದಿ ಪಡಿಸಿದ್ದ ಸರ್ಕಾರ, ಅದನ್ನು ಒಂದೇ ದಿನದಲ್ಲಿ ಬದಲಾವಣೆ ಮಾಡಿದ್ದು, ಖಾಸಗಿ ಆಸ್ಪತ್ರೆ, ಆರೋಗ್ಯ ಕೇಂದ್ರಗಳಲ್ಲಿ ₹2500 ವರೆಗೆ ಸ್ವೀಕರಿಸಬಹುದೆಂದು ಸೂಚಿಸಿದೆ.

ಬಿಪಿಎಲ್‌ ಕಾರ್ಡುದಾರರಿಗೆ ₹1500 ದರ ನಿಗದಿಪಡಿಸಿ ಆದೇಶ ಹೊರಡಿಸಿದೆ. ಎದೆಯ ಡಿಜಿಟಲ್‌ ಅಥವಾ ಸಾಮಾನ್ಯ ಸ್ವರೂಪದ ಎಕ್ಸ್‌ರೇಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಎಕ್ಸ್‌ರೇಗೆ ಗರಿಷ್ಠ ₹ 250 ದರ ನಿಗದಿಪಡಿಸಿದೆ.

ADVERTISEMENT

ಕೋವಿಡ್‌ ರೋಗಿಗಳಲ್ಲಿ ಶ್ವಾಸಕೋಶದ ಸೋಂಕಿನ ಪ್ರಮಾಣ ತಿಳಿಯಲು ಹೆಚ್ಚಿನ ರೋಗಿಗಳಿಗೆ ಸಿ.ಟಿ ಸ್ಕ್ಯಾನ್‌ ಮತ್ತು ಎಕ್ಸ್‌ರೇ ಮಾಡಿಸಲಾಗುತ್ತಿದೆ. ಸಾಮಾನ್ಯ ಸಂದರ್ಭಗಳಲ್ಲಿ ₹ 2,000ದಿಂದ ₹ 3,000 ಇದ್ದ ಸಿ.ಟಿ ಸ್ಕ್ಯಾನ್‌ ದರ ₹ 6,000ದಿಂದ ₹ 8,000ದವರೆಗೂ ಏರಿಕೆಯಾಗಿತ್ತು. ಖಾಸಗಿ ಆಸ್ಪತ್ರೆಗಳು ಮತ್ತು ಪ್ರಯೋಗಾಲಯಗಳು ಜನರನ್ನು ಶೋಷಣೆ ಮಾಡುತ್ತಿವೆ ಎಂಬ ಆರೋಪ ಕೇಳಿಬಂದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.