ಬೆಂಗಳೂರು: ಈ ತಿಂಗಳು ಸರ್ಕಾರಿ ನೌಕರರ ಎರಡನೇ ಶನಿವಾರದ ರಜೆ ರದ್ದುಪಡಿಸಿ ಮೂರನೇ ಶನಿವಾರ ರಜೆ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಇದೇ 18 ಹಾಗೂ 19ರಂದು ಆಯುಧಪೂಜೆ ಮತ್ತು ವಿಜಯದಶಮಿ ಪ್ರಯುಕ್ತ ಸಾರ್ವತ್ರಿಕ ರಜೆ ಇದೆ. 21ರಂದು ಭಾನುವಾರ. ಸರ್ಕಾರಿ ನೌಕರರು 20ರಂದು ಸಾಂದರ್ಭಿಕ ರಜೆ ಬಳಸಿಕೊಳ್ಳುವ ಸಾಧ್ಯತೆ ಇದೆ.
ಇದರಿಂದಾಗಿ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ತೊಂದರೆಯಾಗುತ್ತದೆ. ಹೀಗಾಗಿ, ಇದೇ 13ರ ರಜೆ ರದ್ದುಪಡಿಸಿ 20ರಂದು ನೀಡಲು ತೀರ್ಮಾನಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.