ADVERTISEMENT

ಗ್ರಾಮೀಣ ಸೇವೆ ವೈದ್ಯರ ವೇತನ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 6 ಮೇ 2021, 19:36 IST
Last Updated 6 ಮೇ 2021, 19:36 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಕಡ್ಡಾಯ ಗ್ರಾಮೀಣ ಸೇವೆಗೆ ನಿಯೋಜನೆಯಾಗಿರುವ ಎಂಬಿಬಿಎಸ್‌ ವೈದ್ಯರು, ಸ್ನಾತಕೋತ್ತರ ಪದವೀಧರರು, ಡಿಪ್ಲೊಮಾ ಪದವಿ ಹೊಂದಿರುವ ವೈದ್ಯರ ವೇತನ ಹೆಚ್ಚಿಸಿ ಆರೋಗ್ಯ ಇಲಾಖೆ ಗುರುವಾರ ಆದೇಶ ಹೊರಡಿಸಿದೆ.

ಎಂಬಿಬಿಎಸ್‌ ವೈದ್ಯರಿಗೆ 2021ರ ಮಾರ್ಚ್‌ 31ರವರೆಗಿನ ಅವಧಿಗೆ ಮಾಸಿಕ ₹ 62,666 ವೇತನ ನಿಗದಿಪಡಿಸಲಾಗಿದೆ. ಸ್ನಾತಕೋತ್ತರ ವೈದ್ಯಕೀಯ ಪದವೀಧರರು ಮತ್ತು ಡಿಪ್ಲೊಮಾ ಹೊಂದಿರುವವರಿಗೆ 2021ರ ಮಾರ್ಚ್‌ 31ರವರೆಗೆ ತಿಂಗಳಿಗೆ ₹ 67,615 ಮತ್ತು ಏಪ್ರಿಲ್‌ 1ರಿಂದ ತಿಂಗಳಿಗೆ ₹ 70,000 ವೇತನ ನಿಗದಿಪಡಿಸಲಾಗಿದೆ.

ಈ ಹಿಂದೆ ಕಡ್ಡಾಯ ಗ್ರಾಮೀಣ ಸೇವೆಯ ಎಂಬಿಬಿಎಸ್‌ ವೈದ್ಯರಿಗೆ ಆರೋಗ್ಯ ಇಲಾಖೆಯ ಸಾಮಾನ್ಯ ಕರ್ತವ್ಯದ ವೈದ್ಯರಿಗಿಂತಲೂ ಕಡಿಮೆವೇತನವಿತ್ತು. ಸ್ನಾತಕೋತ್ತರ ವೈದ್ಯಕೀಯ ಪದವೀಧರರು ಮತ್ತು ಡಿಪ್ಲೊಮಾ ಹೊಂದಿರುವವರಿಗೆ ತಿಂಗಳಿಗೆ ₹45,000, ಸೂಪರ್‌ ಸ್ಪೆಷಾಲಿಟಿ ವೈದ್ಯರಿಗೆ ತಿಂಗಳಿಗೆ ₹ 55,000 ವೇತನ ನೀಡಲಾಗುತ್ತಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.