ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿದ ಸುರಕ್ಷಿತ ಗಾಳಿಯ ಗುಣಮಟ್ಟಕ್ಕಿಂತ ಬೆಂಗಳೂರು, ಮಂಗಳೂರು ಮತ್ತು ಮೈಸೂರಿನಲ್ಲಿ ಗಾಳಿಯು ಹಲವು ಪಟ್ಟು ಹೆಚ್ಚು ಕಲುಷಿತಗೊಂಡಿದೆ ಎಂದು ಗ್ರೀನ್‌ಪೀಸ್ ಹೇಳಿದೆ. ಗಾಳಿಯ ಗುಣಮಟ್ಟ ಸುಧಾರಿಸಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳದೇ ಇರುವುದರಿಂದ ಈ ನಗರಗಳಲ್ಲಿ ಸ್ಥಿತಿ ಬಿಗಡಾಯಿಸಿದೆ ಎಂದು ಗ್ರೀನ್‌ಪೀಸ್ ತನ್ನ ‘ಸ್ಪೇರ್ ದಿ ಏರ್–2’ ವರದಿಯಲ್ಲಿ ಕಳವಳ ವ್ಯಕ್ತಪಡಿಸಿದೆ
ಈ ಮೂರೂ ನಗರಗಳಲ್ಲಿ ಪ್ರತಿ ಘನ ಮೀಟರ್ ಗಾಳಿಯಲ್ಲಿ 2.5 ಮೈಕ್ರಾನ್ ಗಾತ್ರದ ಮಾಲಿನ್ಯಕಾರಕ ಕಣಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ
* 10 ಮೈಕ್ರಾನ್ ಗಾತ್ರದ ಮಾಲಿನ್ಯಕಾರಕ ಕಣಗಳ ಸಂಖ್ಯೆಯೂ ವಿಪರೀತ ಎನಿಸುವಷ್ಟು ಏರಿಕೆಯಾಗಿದೆ
* ಮೂರೂ ನಗರಗಳಲ್ಲಿ ನಿರ್ಮಾಣ ಚಟುವಟಿಕೆಗಳಿಂದಲೇ ಅತಿಹೆಚ್ಚು ಮಾಲಿನ್ಯ ಉಂಟಾಗುತ್ತಿದೆ
ಬೆಂಗಳೂರಿಗೆ ನಿರ್ಮಾಣ ಚಟುವಟಿಕೆಯೇ ಕಂಟಕ
2007ರ ವೇಳೆಯಲ್ಲಿ ಬೆಂಗಳೂರಿನ ಗಾಳಿಯ ಗುಣಮಟ್ಟ ಹದಗೆಡಲು ಬಹುದೊಡ್ಡ ಕಾರಣವಾಗಿದ್ದದ್ದು ವಾಹನಗಳಿಂದ ಹೊರಬರುವ ಹೊಗೆ. ಆದರೆ 2020ರ ವೇಳೆಗೆ ಅಧ್ಯಯನ ನಡೆಸಿದಾಗ ನಿರ್ಮಾಣ ಚಟುವಟಿಕೆ ಮತ್ತು ರಸ್ತೆಯಲ್ಲಿನ ದೂಳಿನ ಕಣಗಳಿಂದಲೇ ಗಾಳಿ ಅತಿಹೆಚ್ಚು ಕಲುಷಿತವಾಗುತ್ತಿದೆ. ಈಚಿನ ವರ್ಷಗಳಲ್ಲಿ ತ್ಯಾಜ್ಯ ಸುಡುವುದು ಹೆಚ್ಚಾಗಿರುವುದರಿಂದಲೂ ಗಾಳಿಯ ಗುಣಮಟ್ಟ ಕುಸಿಯುತ್ತಿದೆ ಎಂದು ವರದಿ ಹೇಳಿದೆ
ವಾಯು ಮಾಲಿನ್ಯಕ್ಕೆ ಕಾರಣಗಳು (ಆವರಣದಲ್ಲಿ ಇರುವುದು 2007ರ ಮಾಹಿತಿ)
19.7% (42%); ಸಾರಿಗೆ
61.4% (34%); ನಿರ್ಮಾಣ ಚಟುವಟಿಕೆ ಮತ್ತು ರಸ್ತೆಯಲ್ಲಿನ ದೂಳು
8.3% (14%); ಕೈಗಾರಿಕೆ
2% (7%); ಡೀಸೆಲ್ ಜನರೇಟರ್‌ಗಳು
8.5% (3%); ಉರುವಲು ಮತ್ತು ತ್ಯಾಜ್ಯ ಸುಡುವುದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.