ಬೆಂಗಳೂರು: ವಾಣಿಜ್ಯ ತೆರಿಗೆ ಇಲಾಖೆಯಿಂದ ರಾಜ್ಯದಲ್ಲಿ 120 ಜಿಎಸ್‌ಕೆ (ಜಿಎಸ್‌ಟಿ ಸೇವಾ ಕೇಂದ್ರ) ಬಯೊಮೆಟ್ರಿಕ್ ಕೇಂದ್ರಗಳು ಮಂಗಳವಾರ ಕಾರ್ಯಾರಂಭ ಮಾಡಿವೆ.
ಅರ್ಜಿದಾರರಿಗೆ ಈ ಕೇಂದ್ರಗಳಿಗೆ ಭೇಟಿ ನೀಡುವ ಸಮಯವನ್ನು ಮುಂಗಡವಾಗಿ ನಿಗದಿಗೊಳಿಸುವ ಸೌಲಭ್ಯವನ್ನು ಒದಗಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಈ ಕೇಂದ್ರಗಳಲ್ಲಿ ಆಧಾರ್ ಬಯೊಮೆಟ್ರಿಕ್ ದೃಢೀಕರಣದ ಮೂಲಕ ಹೊಸದಾಗಿ ನೋಂದಣಿ ಪಡೆಯಲು ಇಚ್ಛಿಸುವ ಅರ್ಜಿದಾರರ ಬಯೊಮೆಟ್ರಿಕ್ ದೃಢೀಕರಣ ಮತ್ತು ದಾಖಲೆಗಳ ಪರಿಶೀಲನೆ ಮಾಡಲಾಗುತ್ತದೆ. ಈ ಹಂತದ ಪ್ರಕ್ರಿಯೆಯು ಅಮಾಯಕರ ದಾಖಲೆಗಳನ್ನು ಬಳಸಿಕೊಂಡು ಮಾಡುವ ನಕಲಿ ಜಿಎಸ್‌ಟಿ ನೋಂದಣಿ ತಡೆಯಲು ನೆರವಾಗುತ್ತದೆ ಎಂದು ವಾಣಿಜ್ಯ ತೆರಿಗೆಗಳ ಆಯುಕ್ತರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.