ಬೆಂಗಳೂರು: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ (ಎಚ್‌ಎಎಲ್) ಹಣಕಾಸು ವಿಭಾಗದ ನಿರ್ದೇಶಕರನ್ನಾಗಿ ಬರೇಣ್ಯ ಸೇನಾಪತಿ ಅವರನ್ನು ನೇಮಿಸಲಾಗಿದೆ.
1995 ರಲ್ಲಿ ಎಚ್‌ಎಎಲ್ ಸೇರಿ 29 ವರ್ಷಗಳಿಂದ ಕಾರ್ಪೊರೇಟ್ ಹಣಕಾಸು ವಿಭಾಗದಲ್ಲಿ ವಿವಿಧ ಹುದ್ದೆಗಳಲ್ಲಿ ಅವರು ಕಾರ್ಯನಿರ್ವಹಿಸಿದ್ದಾರೆ. ಈವರೆಗೆ ಅವರು ಕಾರ್ಪೊರೇಟ್ ಕಚೇರಿಯ ಹಣಕಾಸು ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಎಚ್‌ಎಎಲ್ ಪ್ರಕಟಣೆ ತಿಳಿಸಿದೆ.
ಸಂಸ್ಥೆಯು ‘ಮಹಾರತ್ನ’ ಸ್ಥಾನಮಾನ ಪಡೆಯುವಲ್ಲಿ ಸೇನಾಪತಿಯವರ ಪಾತ್ರ ಮಹತ್ವದ್ದಾಗಿದೆ. ಸಂಸ್ಥೆಯ ಇತಿಹಾಸದಲ್ಲಿ ಇದು ಮೈಲಿಗಲ್ಲು. ಅಲ್ಲದೇ, ಇನ್ಸ್‌ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ ಆಫ್ ಇಂಡಿಯಾದ ಸದಸ್ಯರೂ ಆಗಿದ್ದಾರೆ ಎಂದೂ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.