ADVERTISEMENT

ಹಲಸಂಗಿ ಗೆಳೆಯರ ಪ್ರತಿಷ್ಠಾನ; ಎಂಟು ಮಂದಿಗೆ ಪ್ರಶಸ್ತಿ ಘೋಷಣೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2019, 17:18 IST
Last Updated 9 ಫೆಬ್ರುವರಿ 2019, 17:18 IST

ವಿಜಯಪುರ: ಹಲಸಂಗಿ ಗೆಳೆಯರ ಪ್ರತಿಷ್ಠಾನದಿಂದ ಕಾವ್ಯ, ಸಂಶೋಧನೆ, ವಿಮರ್ಶೆ, ಜಾನಪದ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ನೀಡಲಾಗುವ ಪ್ರಶಸ್ತಿಗೆ, ಎಂಟು ಜನರನ್ನು ಆಯ್ಕೆ ಮಾಡಲಾಗಿದೆ.

2017ನೇ ಸಾಲಿನ ಪ್ರಶಸ್ತಿಗೆ ಧಾರವಾಡದ ಡಾ.ಚನ್ನವೀರ ಕಣವಿ (ಕಾವ್ಯ), ಬೆಂಗಳೂರಿನ ಪ್ರೊ.ಷ.ಶೆಟ್ಟರ (ಸಂಶೋಧನೆ), ಕಲಬುರ್ಗಿಯ ಡಾ.ಮ.ಗು.ಬಿರಾದಾರ (ಜಾನಪದ), ಬೆಳಗಾವಿಯ ಪ್ರಕಾಶ ಗಿರಿಮಲ್ಲನವರ (ಯುವ ಪ್ರಶಸ್ತಿ) ಆಯ್ಕೆಯಾಗಿದ್ದಾರೆ.

2018ನೇ ಸಾಲಿನ ಪ್ರಶಸ್ತಿಗೆ ಮುಂಬೈನ ಡಾ.ಜಿ.ವಿ.ಕುಲಕರ್ಣಿ (ಕಾವ್ಯ), ಧಾರವಾಡದ ಡಾ.ವೀರಣ್ಣ ರಾಜೂರ (ವಿಮರ್ಶೆ/ಸಂಶೋಧನೆ), ಮೈಸೂರಿನ ಡಾ.ಪಿ.ಕೆ.ರಾಜಶೇಖರ (ಜಾನಪದ), ಬೆಂಗಳೂರಿನ ಮಂಜುಳಾ ಹುಲಕುಂಟೆ (ಯುವ ಪ್ರಶಸ್ತಿ) ಆಯ್ಕೆಯಾಗಿದ್ದಾರೆ.

ಪ್ರತಿಷ್ಠಾನದ ಆರು ಪ್ರಶಸ್ತಿಗಳು ತಲಾ ₹ 51000 ನಗದು ಮತ್ತು ಪ್ರಶಸ್ತಿ ಪತ್ರ ಹಾಗೂ ಯುವ ಪ್ರಶಸ್ತಿ ತಲಾ ₹ 25000 ನಗದು ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದೆ.

ADVERTISEMENT

ಸಾಹಿತಿ ಡಾ.ಗುರುಲಿಂಗ ಕಾಪಸೆ ನೇತೃತ್ವದಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮುಂಬರುವ ಮಾರ್ಚ್‌ ತಿಂಗಳಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗುವುದು ಎಂದು ಪ್ರತಿಷ್ಠಾನದ ಅಧ್ಯಕ್ಷರೂ ಆಗಿರುವ ವಿಜಯಪುರ ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟೆಣ್ಣವರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.