ADVERTISEMENT

ಹಾನಗಲ್‌ ಅತ್ಯಾಚಾರ ಪ್ರಕರಣ: ಇನ್‌ಸ್ಪೆಕ್ಟರ್‌ ಶ್ರೀಧರ್‌, ಕಾನ್‌ಸ್ಟೆಬಲ್‌ ಅಮಾನತು

ಹಾನಗಲ್‌ ಅತ್ಯಾಚಾರ ಪ್ರಕರಣದಲ್ಲಿ ಕರ್ತವ್ಯಲೋಪದ ಆರೋಪದ ಮೇಲೆ ಇನ್‌ಸ್ಪೆಕ್ಟರ್‌ ಶ್ರೀಧರ್‌ ಎಸ್‌.ಆರ್‌, ಕಾನ್‌ಸ್ಟೆಬಲ್‌ ಇಲಿಯಾಜ್‌ ಶೇತಸನದಿ ಅಮಾನತು

​ಪ್ರಜಾವಾಣಿ ವಾರ್ತೆ
Published 16 ಜನವರಿ 2024, 13:36 IST
Last Updated 16 ಜನವರಿ 2024, 13:36 IST
<div class="paragraphs"><p>ಶ್ರೀಧರ್‌ ಎಸ್‌.ಆರ್‌,&nbsp;ಇಲಿಯಾಜ್‌ ಶೇತಸನದಿ</p></div>

ಶ್ರೀಧರ್‌ ಎಸ್‌.ಆರ್‌, ಇಲಿಯಾಜ್‌ ಶೇತಸನದಿ

   

ಹಾವೇರಿ: ಹಾನಗಲ್ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಕರ್ತವ್ಯಲೋಪ ಮತ್ತು ವಿಳಂಬ ಧೋರಣೆ ತೋರಿದ ಆರೋಪದ ಮೇರೆಗೆ ಹಾನಗಲ್‌ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಶ್ರೀಧರ್‌ ಎಸ್‌.ಆರ್‌. ಮತ್ತು ಕಾನ್‌ಸ್ಟೆಬಲ್‌ ಇಲಿಯಾಜ್‌ ಶೇತಸನದಿ ಅವರನ್ನು ಎಸ್ಪಿ ಅಂಶುಕುಮಾರ್‌ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. 

ಹಾನಗಲ್‌ ತಾಲ್ಲೂಕಿನ ನಾಲ್ಕರ ಕ್ರಾಸ್‌ ಸಮೀಪದ ಈಡಿಗಾಸ್‌ ಲಾಡ್ಜ್‌ನಲ್ಲಿ ಜ.8ರಂದು ಕೊಠಡಿಯಲ್ಲಿದ್ದ ಶಿರಸಿ ಮೂಲದ ಹಿಂದೂ ಪುರುಷ ಮತ್ತು ಮುಸ್ಲಿಂ ಮಹಿಳೆ ಮೇಲೆ ಮುಸ್ಲಿಂ ಯುವಕರ ಗುಂಪು ಹಲ್ಲೆ ನಡೆಸಿತ್ತು. ಹಲ್ಲೆ ನಡೆಸಿದ ನಂತರ ಯುವತಿಯನ್ನು ಹೊರಗಡೆ ಎಳೆದೊಯ್ದ ಆರೋಪಿಗಳು, ಆಕೆಗೆ ಕಟ್ಟಿಗೆಯಿಂದ ಹೊಡೆದು ಹಲ್ಲೆ ನಡೆಸಿದ್ದರು. ಆ ನಂತರ ಸಾಮೂಹಿಕ ಅತ್ಯಾಚಾರ ಎಸಗಿದ್ದರು. 

ADVERTISEMENT

ಜ.10ರಂದು ರೂಂ ಬಾಯ್‌ ನೀಡಿದ ದೂರಿನ ಮೇರೆಗೆ ಹಾನಗಲ್‌ ಪೊಲೀಸ್‌ ಠಾಣೆಯಲ್ಲಿ ‘ಅನೈತಿಕ ಪೊಲೀಸ್‌ಗಿರಿ’ ಪ್ರಕರಣ ಮಾತ್ರ ದಾಖಲಾಗಿತ್ತು.

ಜ.11ರಂದು ಸಂತ್ರಸ್ತೆಯು ನ್ಯಾಯಾಧೀಶರ ಮುಂದೆ ಕಲಂ ‘164’ ಸಿಆರ್‌ಪಿಸಿ ಅಡಿಯಲ್ಲಿ ಹೇಳಿಕೆಯನ್ನು ದಾಖಲಿಸಿ, 7 ಜನರಿಂದ ಸಾಮೂಹಿಕ ಅತ್ಯಾಚಾರವಾಗಿದೆ ಎಂದು ತಿಳಿಸಿದ್ದರು. ಆನಂತರ ಎಫ್‌ಐಆರ್‌ನಲ್ಲಿ ‘376–ಡಿ’ ಸೆಕ್ಷನ್‌ ಅನ್ನು ಪೊಲೀಸರು ಸೇರಿಸಿದ್ದರು. 

ಈ ಪ್ರಕರಣದಲ್ಲಿ ಮಾಹಿತಿ ಸಂಗ್ರಹಿಸುವಲ್ಲಿ ವೈಫಲ್ಯ, ಎಫ್‌ಐಆರ್‌ ದಾಖಲಿಸುವಲ್ಲಿ ನಿರ್ಲಕ್ಷ್ಯ ಮತ್ತು ಆರೋಪಿಗಳನ್ನು ಶೀಘ್ರ ಬಂಧಿಸುವಲ್ಲಿ ವಿಳಂಬ ಧೋರಣೆ ಆರೋಪದ ಮೇರೆಗೆ ಅಮಾನತು ಮಾಡಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.