ಬೆಂಗಳೂರು: ‘ರಾಜ್ಯದ ಹೋರಾಟ ಗಾರ ರಾಜಕಾರಣಿಗಳಾದ ಎಚ್.ಡಿ. ದೇವೇಗೌಡ, ಬಿ.ಎಸ್.ಯಡಿಯೂರಪ್ಪ ಮತ್ತು ಎಸ್.ಬಂಗಾರಪ್ಪ ಅವರು ರಾಷ್ಟ್ರಮಟ್ಟದಲ್ಲಿ ಪ್ರಭಾವಿಗಳಾಗದೇ ಇರಲು, ಇಂಗ್ಲಿಷ್ ಮತ್ತು ಹಿಂದಿ ಭಾಷಾ ಜ್ಞಾನದ ಕೊರತೆಯೇ ಕಾರಣ’ ಎಂದು ಬಿಜೆಪಿ ಶಾಸಕ ಹರತಾಳು ಹಾಲಪ್ಪ ಹೇಳಿದರು.
‘ಇವರಿಗೆ ಇಂಗ್ಲಿಷ್ ಮತ್ತು ಹಿಂದಿ ಭಾಷೆ ತಲೆಗೆ ಹತ್ತಲಿಲ್ಲ. ಇದರಿಂದಾಗಿ ಮೂವರಿಗೂ ರಾಷ್ಟ್ರ ರಾಜಕಾರಣ ಪ್ರವೇಶ ಕಷ್ಟವಾಯಿತು. ಮುಂದಿನ ತಲೆಮಾರಿನವರಿಗೆ ಈ ಸಮಸ್ಯೆ ಆಗ ಬಾರದು ಎಂದರೆ, ಪ್ರಾಥಮಿಕ ಶಾಲಾ ಹಂತದಲ್ಲೇ ಸ್ಪೋಕನ್ ಇಂಗ್ಲಿಷ್ ಕಲಿಸಿ ಕೊಡಬೇಕು’ ಎಂದು ಅವರು ವಿಧಾನಸಭೆಯಲ್ಲಿ ಸಲಹೆ ನೀಡಿದರು.
‘ನಮ್ಮ ರಾಜ್ಯದ ರಾಜಕಾರಣಿಗಳಲ್ಲಿ ಬಹುತೇಕರಿಗೆ ಭಾಷಾ ಸಮಸ್ಯೆ ಇದೆ’ ಎಂದು ಅವರು ಹೇಳಿದರು.
ಯಡಿಯೂರಪ್ಪ ಜಾರಿಗೆ ತಂದ ಬೈಸಿಕಲ್ ಯೋಜನೆಯಿಂದ ರಾಜ್ಯದಲ್ಲಿ ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪದವೀಧರರಾದರು. ಹೋರಾಟದ ಹಿನ್ನೆಲೆಯಿಂದ ಬಂದ ಯಡಿಯೂರಪ್ಪ ಅಂತಹವರು ಮಾತ್ರ ಭಾಗ್ಯಲಕ್ಷ್ಮಿ, ಸೈಕಲ್ ಯೋಜನೆ ಜಾರಿಗೆ ತರಲು ಸಾಧ್ಯ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.