ADVERTISEMENT

ಹಟ್ಟಿ ಚಿನ್ನದ ಗಣಿ ಕಂಪನಿ: 1,553 ಕೆ.ಜಿ ಚಿನ್ನ ಉತ್ಪಾದನೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2024, 13:50 IST
Last Updated 21 ಏಪ್ರಿಲ್ 2024, 13:50 IST
 ಹಟ್ಟಿ ಚಿನ್ನದ ಗಣಿ ಕಂಪನಿಯ ಆಡಳಿತ ಕಚೇರಿ ಹೋರ ನೋಟ 
 ಹಟ್ಟಿ ಚಿನ್ನದ ಗಣಿ ಕಂಪನಿಯ ಆಡಳಿತ ಕಚೇರಿ ಹೋರ ನೋಟ    

ಹಟ್ಟಿ ಚಿನ್ನದ ಗಣಿ (ರಾಯಚೂರು ಜಿಲ್ಲೆ): ಸರ್ಕಾರಿ ಸ್ವಾಮ್ಯದ ಹಟ್ಟಿ ಚಿನ್ನದ ಗಣಿ ಕಂಪನಿಯು 2023–24ನೇ ಆರ್ಥಿಕ ವರ್ಷದಲ್ಲಿ ಒಟ್ಟು 1,553 ಕೆ.ಜಿ ಚಿನ್ನ ಉತ್ಪಾದಿಸುವ ಮೂಲಕ ಶೇ 90ರಷ್ಟು ಗುರಿ ಸಾಧಿಸಿದೆ.

ಕಳೆದ ಆರ್ಥಿಕ ವರ್ಷದಲ್ಲಿ 7.51 ಲಕ್ಷ ಟನ್ ಅದಿರು ತೆಗೆದು ಸಂಸ್ಕರಿಸುವ ಗುರಿ ಹೊಂದಿತ್ತು. ಒಟ್ಟು 7.18 ಲಕ್ಷ ಟನ್ ಅದಿರು ತೆಗೆದಿದೆ. ಒಟ್ಟು 1,750.578 ಕೆ.ಜಿ. ಚಿನ್ನ ಉತ್ಪಾದನೆಯ ಗುರಿ ಹೊಂದಿತ್ತು. ಒಟ್ಟು 1,553.110 ಕೆ.ಜಿ ಚಿನ್ನ ಉತ್ಪಾದಿಸಿದೆ.

2023ರ ಏಪ್ರಿಲ್‌ನಲ್ಲಿ 98.846 ಕೆ.ಜಿ, ಮೇ ತಿಂಗಳಿನಲ್ಲಿ 94.234 ಕೆ.ಜಿ, ಜೂನ್‌ನಲ್ಲಿ 98.542 ಕೆ.ಜಿ, ಜುಲೈನಲ್ಲಿ 99.642 ಕೆ.ಜಿ, ಆಗಸ್ಟ್‌ನಲ್ಲಿ 110.600 ಕೆ.ಜಿ, ಸೆಪ್ಟೆಂಬರ್‌ನಲ್ಲಿ 109.427 ಕೆ.ಜಿ, ಅಕ್ಟೋಬರ್‌ನಲ್ಲಿ 113.260 ಕೆ.ಜಿ, ನವೆಂಬರ್‌ನಲ್ಲಿ 83.273 ಕೆ.ಜಿ ಹಾಗೂ ಡಿಸೆಂಬರ್‌ನಲ್ಲಿ 118.372 ಕೆ.ಜಿ. ಚಿನ್ನ ಉತ್ಪಾದಿಸಲಾಗಿದೆ. 

ADVERTISEMENT

ಪ್ರಸಕ್ತ ವರ್ಷದ ಜನವರಿಯಲ್ಲಿ 132.517 ಕೆ.ಜಿ, ಫೆಬ್ರುವರಿಯಲ್ಲಿ 253.171 ಕೆ.ಜಿ, ಮಾರ್ಚ್‌ನಲ್ಲಿ 241.221 ಕೆ.ಜಿ. ಚಿನ್ನ ಉತ್ಪಾದಿಸಲಾಗಿದೆ ಎಂದು ಆಡಳಿತ ಮಂಡಳಿಯು ತಿಳಿಸಿದೆ.


‘ಅಧಿಕಾರಿಗಳು ಹಾಗೂ ಕಾರ್ಮಿಕರ ಪರಿಶ್ರಮದ ಫಲವಾಗಿ ಶೇ 90ರಷ್ಟು ಉತ್ಪಾದನೆ ಸಾಧ್ಯವಾಗಿದೆ. ನೌಕರ ವರ್ಗಕ್ಕೆ ಇನ್ನಷ್ಟು ಮೂಲ ಸೌಕರ್ಯ ಒದಗಿಸುವ ದಿಸೆಯಲ್ಲಿ ಚಿಂತನೆ ನಡೆದಿದೆ’ ಎಂದು ಹಟ್ಟಿ ಚಿನ್ನದ ಗಣಿ ಕಂಪನಿಯ ಕಾರ್ಯ ನಿರ್ವಾಹಕ ನಿರ್ದೇಶಕ ಪ್ರಕಾಶ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.