ಬೆಂಗಳೂರು:ತಮಿಳುನಾಡಿನಮಾಮಲ್ಲಪುರಂನ ಕಡಲ ತೀರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಬೆಳ್ಳಂಬೆಳಿಗ್ಗೆ ‘ಪ್ಲಾಗಿಂಗ್‘(Plogging) ಮಾಡಿದ್ದನ್ನು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಶ್ಲಾಘಿಸಿದ್ದಾರೆ (‘ಪ್ಲಾಗಿಂಗ್‘ ಎಂದರೆ ವಾಯುವಿಹಾರ/ಜಾಗಿಂಗ್ ಮಾಡುತ್ತಾ ಜತೆಜತೆಗೆ, ಅಲ್ಲಲ್ಲಿ ಬಿದ್ದಿರುವ ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಕಸವನ್ನು ಹೆಕ್ಕುವುದು).
‘ತಮಿಳುನಾಡಿನಮಾಮಲ್ಲಪುರಂ ಬೀಚ್‌ನಲ್ಲಿಪ್ರಧಾನಿ ನರೇಂದ್ರ ಮೋದಿಯವರು ಬರಿಗಾಲಿನಲ್ಲಿ’ಪ್ಲಾಗಿಂಗ್‘ ಮಾಡುತ್ತಿರುವ ವಿಡಿಯೊ ನೋಡಿದೆ. ‘ಪ್ಲಾಸ್ಟಿಕ್‌ಮುಕ್ತ ಭಾರತ’ದ ನಿಟ್ಟಿನಲ್ಲಿ ಇದೊಂದು ಸ್ಫೂರ್ತಿದಾಯಕ ಆರಂಭ’ ಎಂದು ದೇವೇಗೌಡ ಟ್ವೀಟ್ ಮಾಡಿದ್ದಾರೆ.
ಬೆಳಿಗ್ಗೆಸುಮಾರು 30 ನಿಮಿಷ ಸಮುದ್ರ ತೀರದಲ್ಲಿ ವಾಯುವಿಹಾರದಜತೆಗೆ ಅಲ್ಲಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಹಾಗೂ ಇತರೆ ಕಸವನ್ನು ಚೀಲದಲ್ಲಿ ಸಂಗ್ರಹಿಸುವ ಚಟುವಟಿಕೆಯನ್ನು ಪ್ರಧಾನಿ ಮೋದಿ ಮಾಡಿದ್ದರು. ಬಳಿಕಕಸ ಸಂಗ್ರಹಿಸಿದ ಚೀಲವನ್ನು ಹೊಟೇಲ್ ಸಿಬ್ಬಂದಿ ಜಯರಾಜ್ ಅವರಿಗೆ ಒಪ್ಪಿಸಿದ್ದಾಗಿ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದರು. ಮೋದಿ ಅವರ’ಪ್ಲಾಗಿಂಗ್‘ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಇನ್ನಷ್ಟು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.