ಬೆಂಗಳೂರು: ‘ಎಚ್‌ಎಂಟಿ ಕಾರ್ಖಾನೆಯ ಪುನಶ್ಚೇತನಕ್ಕೆ ಸಲಹೆಗಳನ್ನು ಪಡೆಯಲು ಸಲಹಾ ಸಂಸ್ಥೆ ನೇಮಿಸುವ ಸಂಬಂಧ ಮಾತುಕತೆ ನಡೆಯುತ್ತಿದೆ’ ಎಂದು ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಶನಿವಾರ ಹೇಳಿದರು.
ನಗರದ ಜಾಲಹಳ್ಳಿಯ ಎಚ್‌ಎಂಟಿ ಟೂಲ್ಸ್ ಮತ್ತು ಮೆಷಿನ್ಸ್ ಘಟಕಕ್ಕೆ ಭೇಟಿ ನೀಡಿದ್ದ ಅವರು, ಕಾರ್ಮಿಕರ ಜತೆಗೆ ಚರ್ಚಿಸುವಾಗ ಈ ಮಾತು ಹೇಳಿದರು. ‘ಸಚಿವಾಲಯ ಮತ್ತು ನೀತಿ ಆಯೋಗದಲ್ಲಿ ಚರ್ಚೆ ನಡೆದಿದೆ, ಮಹತ್ವದ ಹೆಜ್ಜೆ ಇಡಲಾಗಿದೆ’ ಎಂದರು.
‘ಪ್ರಧಾನಿ ನರೇಂದ್ರ ಮೋದಿ ಅವರು ಕೈಗಾರಿಕೆಗಳ ಸ್ಥಾಪನೆ ಮತ್ತು ಉದ್ಯೋಗ ಸೃಷ್ಟಿಗೆ ಒತ್ತು ನೀಡುತ್ತಾರೆ. ಎಚ್‌ಎಂಟಿ ಪುನಶ್ಚೇತನದ ಯತ್ನಗಳಿಗೆ ಫಲ ದೊರೆಯುತ್ತದೆ. ಒಂದೆರಡು ತಿಂಗಳು ಕಾಲಾವಕಾಶ ನೀಡಿ’ ಎಂದರು.
ರೋಬೊಗಳ ಮೂಲಕವೇ ಹೂಗುಚ್ಛ ನೀಡುವ ಮೂಲಕ ಕುಮಾರಸ್ವಾಮಿ ಅವರನ್ನು ಸ್ವಾಗತಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.