ಬೆಂಗಳೂರು: ಈ ಬಾರಿ 70 ಶಾಸಕರು ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ. ಅಧಿವೇಶನಲ್ಲಿ ನೂತನ ಶಾಸಕರು ಪಾಲ್ಗೊಳ್ಳುವುದು ತುಂಬಾ ಅವಶ್ಯ. ಈ ಹಿನ್ನೆಲೆಯಲ್ಲಿ ನೂತನ ಶಾಸಕರಿಗೆ ಮೂರು ದಿನ ತರಬೇತಿ ಶಿಬಿರ ಏರ್ಪಡಿಸಲಾಗುವುದು ಎಂದು ವಿಧಾನಸಭೆಯ ಸ್ಪೀಕರ್ ಯು.ಟಿ ಖಾದರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೂತನ ಶಾಸಕರಿಗೆ ಹೆಲ್ತ್ ಫಿಟ್‌ನೆಸ್ ಮತ್ತು ಟ್ರೈನಿಂಗ್ ಕ್ಯಾಂಪ್ ನಡೆಸಲಾಗುವುದು. ನೆಲಮಂಗಲದಲ್ಲಿ ನ್ಯೂಚರೋಪತಿ ಚಿಕಿತ್ಸೆ ಇರಲಿದೆ. ಜೂನ್ 26ನೇ ತಾರೀಖಿನಿಂದ ಮೂರು ದಿನಗಳ ಕಾಲ ತರಬೇತಿ ನಡೆಯಲಿದೆ. ಫಿಟ್ ನೆಸ್ ಜೊತೆಗೆ ಅಧಿವೇಶನದ ಬಗ್ಗೆ ತರಬೇತಿ ನೀಡಲಾಗುತ್ತದೆ ಎಂದು ಹೇಳಿದರು.
ತರಬೇತಿ ಸಮಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಮತ್ತು ಎಚ್.ಡಿ. ಕುಮಾರಸ್ಚಾಮಿ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜೊತೆ ಶಾಸಕರಿಗೆ ಸಂವದ ಏರ್ಪಡಿಸಲಾಗುವುದು ಎಂದು ಹೇಳಿದರು.
ಬಜೆಟ್ ಮಂಡನೆ ಹೇಗೆ? ಶಾಸನ ರಚನೆ, ವಿಧಾನಭೆ ಮತ್ತು ಪರಿಷತ್ ಮಹತ್ವ ಏನು?, ಶಾಸಕ ಹಕ್ಕುಗಳು ಏನು ಎಂಬ ಎಲ್ಲ ಮಾಹಿತಿಯನ್ನು ತರಬೇತಿಯಲ್ಲಿ ನೂತನ ಶಾಸಕರಿಗೆ ತಿಳಿಸಕೊಡಲಾಗುವುದು. ಹಿರಿಯ ಮಾಜಿ ಸಚಿವರು ಕಿರಿಯ ಶಾಸಕರಿಗೆ ತರಬೇತಿ ನೀಡಲಿದ್ದಾರೆ ಎಂದರು.
ಅಲ್ಲದೇ ತರಬೇತಿ ಸಮಯದಲ್ಲಿ ವಿವಿಧ ಕ್ಷೇತ್ರದ ನಾಯಕರುಗಳಿಂದ ನೂತನ ಶಾಸಕರಿಗೆ ವಿಶೇಷ ತರಗತಿಗಳನ್ನು ತೆಗೆದುಕೊಳ್ಳಲಿದ್ದಾರೆ. ಅಧಿವೇಶನ ಮುಗಿದ ಮೂಲಕ ಹಿರಿಯರಿಗೂ ರಿಫ್ರೆಶಿಂಗ್ ಕ್ಯಾಂಪ್ ನಡೆಸುತ್ತೇವೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.