ಬೆಂಗಳೂರು: ಭ್ರಷ್ಟಾಚಾರ ಕುರಿತ ಚರ್ಚೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಜೆಪಿಯ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಮಧ್ಯೆ ಗುರುವಾರ ವಿಧಾನಸಭೆಯಲ್ಲಿ ಭಾರಿ ವಾಕ್ಸಮರಕ್ಕೆ ಕಾರಣವಾಯಿತು.
ಈ ಇಬ್ಬರ ಮಧ್ಯೆ ಆರಂಭವಾದ ಮಾತಿನ ಸಮರ, ಕಾಂಗ್ರೆಸ್– ಬಿಜೆಪಿ ಮಧ್ಯದ ಜಗಳವಾಗಿ ಪರಿವರ್ತನೆಯಾಯಿತು. ಎರಡೂ ಕಡೆಯ ಸದಸ್ಯರ ಗದ್ದಲದಿಂದ ಕೆಲವು ಸಮಯ ಸದನದಲ್ಲಿ ಕೋಲಾಹಲದ ವಾತಾವರಣ ನಿರ್ಮಾಣವಾಗಿತ್ತು.
ಮಾತಿನ ಚಕಮಕಿ ಹೀಗಿತ್ತು.
* ನಿಂದೆಲ್ಲ ಬಿಚ್ಚಿಡಬೇಕಾಗುತ್ತದೆ ನಾನೀಗ ಅಷ್ಟೇ. ಕೆಲವರದೆಲ್ಲ ತೆಗಿತೀನಿ ಈಗ. ನೀನು ಭ್ರಷ್ಟಾಚಾರದ ಪಿತಾಮಹ.
* ದಲಿತ ಅಂತ ಹೇಳಬೇಡಿ ಎಂದು ಸಂವಿಧಾನದಲ್ಲಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಎಂದು ಹೇಳಿ. ಪದೇ ಪದೇ ದಲಿತ, ದಲಿತ ಅಂತ ಯಾಕೆ ಹೇಳ್ತೀರಿ?
* ಬಿಜೆಪಿಯವರು ಸಾಮಾಜಿಕ ನ್ಯಾಯದ ವಿರೋಧಿಗಳು ಎನ್ನುವುದು ಇವರ ನಡವಳಿಕೆಯಿಂದಲೇ ಗೊತ್ತಾಗುತ್ತದೆ.
* 40 ವರ್ಷದಿಂದ ರಾಜಕೀಯದಲ್ಲಿದ್ದೇನೆ. ಒಂದು ಕಪ್ಪು ಚುಕ್ಕೆ ಇಲ್ಲ. ನೀನು ಸುಳ್ಳು ಹೇಳಿದರೆ ಜನರು ನಂಬುವುದಿಲ್ಲ. ಅನಾಚಾರ, ಭ್ರಷ್ಟಾಚಾರ ಮಾಡಿ ನಮಗೆ ಹೇಳುತ್ತಾನೆ.
* ಇವರ ಭ್ರಷ್ಟಾಚಾರ ಬಯಲಾಗಿದೆ. ಇವರ ಕಾಲದಲ್ಲಿ ಏನೇನು ನಡೀತು ಎಲ್ಲ ತೆಗೆದಿಡ್ತೀನಿ. ನೀವು ಭ್ರಷ್ಟಾಚಾರ ತಡೆದಿದ್ದಕ್ಕೆ ಡಿ.ಎಸ್. ವೀರಯ್ಯ ಜೈಲಿಗೆ ಹೋಗಿದ್ದಾ? ಮಾನ ಮರ್ಯಾದೆ ಇದೆಯಾ ? ಎಪಿಎಂಸಿ. ಬೋವಿ ಅಭಿವೃದ್ಧಿ ನಿಗಮ, ದೇವರಾಜ ಅರಸು ಟ್ರಕ್ ಟರ್ಮಿನಲ್‌ನಲ್ಲಿ ಏನಾಯಿತು?
* ಸರ್ಕಾರ ಹೇಗೆ ನಡೆಸಬೇಕು ಅನ್ನೋದು ನಿನ್ನಿಂದ ಕಲಿಯಬೇಕಿಲ್ಲ. ಸುಮ್ನೆ ಕೂತ್ಕೊ.
* 100 ಪರ್ಸೆಂಟ್ ಸರ್ಕಾರ, ಪೇಸಿಎಂ ನೀವೆ. ನಾಚಿಕೆ ಇದೆಯಾ? ಮಾತನಾಡಲು ಯಾವ ನೈತಿಕತೆ ಇದೆ ನಿಮಗೆ. 100 ಪರ್ಸೆಂಟ್ ಭ್ರಷ್ಟಾಚಾರಕ್ಕೆ ದಾಖಲೆ ಕೊಡ್ತೀವಿ.
* ನಿಮ್ಮದೇ ಭ್ರಷ್ಟಾಚಾರ. ನೀವು 100 ಪರ್ಸೆಂಟ್ ಸಿಎಂ. ಕರ್ನಾಟಕ ಇಂತಹ ಭ್ರಷ್ಟ ಮುಖ್ಯಮಂತ್ರಿಯನ್ನು ಯಾವತ್ತೂ ಕಂಡಿರಲಿಲ್ಲ.
* ತೆಗೀರಿ, ಯಾರು ಬೇಡ ಅಂದವರು. ನಿಮಗೆ ಅಧಿಕಾರ ಕೊಟ್ಟಿದ್ದೇ ಅದಕ್ಕಾಗಿ. ಭ್ರಷ್ಟಾಚಾರದ ವಿರುದ್ಧವಾಗಿದ್ದೀವಿ, ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೀವಿ, 40 ಪರ್ಸೆಂಟ್ ಸರ್ಕಾರ ಅಂತ ಆರೋಪ ಮಾಡಿಕೊಂಡು ಬಂದ್ರಿ. ಈಗ 100 ಪರ್ಸೆಂಟ್ ಸರ್ಕಾರ ನಡೆಸ್ತಾ ಇದ್ದೀರಿ.
* ಇಂತಹ ಭ್ರಷ್ಟ ಮುಖ್ಯಮಂತ್ರಿಯನ್ನೇ ಮುಂದುವರಿಸಿಕೊಂಡು ಹೋಗುವ ಪರಿಸ್ಥಿತಿ ಕಾಂಗ್ರೆಸ್‌ಗೆ ಬಂದಿದೆ. ಭ್ರಷ್ಟರಾದರೂ ಅವರೇ ನಾಯಕ. ಪರ್ಯಾಯ ನಾಯಕರೇ ಇಲ್ಲ. ಬಡವರ ದುಡ್ಡು ಲೂಟಿ ಹೊಡೆಯೋದೇ ಆಡಳಿತವಾ?
* ನೀವೇ ಸ್ವತಃ ಆರಂಭ ಮಾಡಿದ್ದ ಅಹಿಂದದಲ್ಲಿ ಏನಿದೆ? ನೀವೇ ಹೇಳಿಕೊಂಡು ಬಂದು ಈಗ ಬೇರೆಯವರಿಗೆ ಏಕೆ ಪಾಠ ಹೇಳ್ತೀರಿ. ಮೊದಲು ಅವರು ಸರಿ ಮಾಡಿಕೊಳ್ಳಲಿ. ಆಮೇಲೆ ಉಳಿದವರಿಗೆ ಪಾಠ ಹೇಳಿ.
* ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ಹೇಳುತ್ತಾ ಇದ್ದೀವಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.