ADVERTISEMENT

ದಿಕ್ಕು ಬದಲಿಸಿದ ‘ನಿಸರ್ಗ’: ಕಾರವಾರ, ಕೊಡಗಿನಲ್ಲಿ ಭಾರಿ ಮಳೆ

ಸಮುದ್ರದ ಉಬ್ಬರ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 3 ಜೂನ್ 2020, 21:07 IST
Last Updated 3 ಜೂನ್ 2020, 21:07 IST
ಮಂಗಳೂರಿನ ಉಳ್ಳಾಲ ಬಳಿ ಅರಬ್ಬಿ ಸಮುದ್ರದ ಉಬ್ಬರ ಹೆಚ್ಚಾಗಿರುವುದು
ಮಂಗಳೂರಿನ ಉಳ್ಳಾಲ ಬಳಿ ಅರಬ್ಬಿ ಸಮುದ್ರದ ಉಬ್ಬರ ಹೆಚ್ಚಾಗಿರುವುದು   

ಬೆಂಗಳೂರು: ರಾಜ್ಯದ ಕಾರವಾರ, ಕೊಡಗು ಜಿಲ್ಲೆಗಳಲ್ಲಿ ಬುಧವಾರ ಭಾರಿ ಮಳೆಯಾಗಿದ್ದರೆ, ಚಿಕ್ಕಮಗಳೂರು ಜಿಲ್ಲೆಯ ಕೆಲವಡೆ ಹದವಾದ ಮಳೆ ಸುರಿದಿದೆ. ಶಿವಮೊಗ್ಗ ಜಿಲ್ಲೆಯ ಹಲವೆಡೆ ಗಾಳಿ ಸಹಿತ ಜೋರು ಮಳೆಯಾಗಿದೆ.

‘ನಿಸರ್ಗ’ ಚಂಡಮಾರುತದ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ನಿರೀಕ್ಷಿಸಲಾಗಿತ್ತು. ಆದರೆ, ಚಂಡಮಾರುತವು ಸಮುದ್ರದಲ್ಲಿ ಉತ್ತರಕ್ಕೆ ಚಲಿಸಿದ್ದು, ಜಿಲ್ಲೆಯಲ್ಲಿ ಭಾರಿ ಮಳೆ ಅಥವಾ ಗಾಳಿಯಿಂದ ಹಾನಿ ಸಂಭವಿಸಿಲ್ಲ.

ಕಾರವಾರದಲ್ಲಿ ಬುಧವಾರ ಬೆಳಿಗ್ಗೆ 9ಕ್ಕೆಧಾರಾಕಾರ ಮಳೆಆರಂಭವಾಗಿಸುಮಾರು ಮೂರು ತಾಸು ಎಡೆಬಿಡದೇ ಸುರಿಯಿತು. ‘ನಿಸರ್ಗ’ ಚಂಡಮಾರುತದ ಪ್ರಭಾವದಿಂದ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ದೊಡ್ಡ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ.

ADVERTISEMENT

ಮೀನುಗಾರರ ರಕ್ಷಣೆ:ಗೋವಾದ ವಾಸ್ಕೊ ಬಳಿ ಚಂಡಮಾರುತಕ್ಕೆ ಸಿಲುಕಿ ಮುಳುಗುವಹಂತದಲ್ಲಿದ್ದ ದೋಣಿಯಿಂದಏಳು ಮಂದಿಯನ್ನು ಸಮೀಪದಲ್ಲಿದ್ದ ದೋಣಿಗಳ ಮೀನುಗಾರರು ಮಂಗಳವಾರ ರಕ್ಷಿಸಿದ್ದಾರೆ.

ಉಡುಪಿ ಜಿಲ್ಲೆ ಮಲ್ಪೆಯ ವಡಭಾಂಡೇಶ್ವರದ ದೀಪಿಕಾ ಎಂಬುವರಿಗೆ ಸೇರಿದ ‘ಶ್ರೀದುರ್ಗಾ ಹನುಮ’ ಹೆಸರಿನ ದೋಣಿ ಇದಾಗಿದೆ.

ಧಾರವಾಡ, ಗದಗ, ಹಾವೇರಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಯಲ್ಲಿ ಮಳೆ ಆಗಿದೆ.

ಕೊಡಗು ಜಿಲ್ಲೆಯ ಮಡಿಕೇರಿ, ನಾಪೋಕ್ಲು, ಗಾಳಿಬೀಡು ಹಾಗೂ ತಲಕಾವೇರಿಯಲ್ಲಿ ಗಾಳಿಸಹಿತ ಬಿರುಸಿನ ಮಳೆಯಾಗಿದೆ. ಅಪಾಯಕಾರಿ ಸ್ಥಳದಲ್ಲಿ ವಾಸಿಸುತ್ತಿರುವ ಪ್ರದೇಶಗಳ ಜನರಿಗೆ ನಗರಸಭೆ ನೋಟಿಸ್‌ ನೀಡಲು ಮುಂದಾಗಿದ್ದು, ನೋಟಿಸ್‌ ತಲುಪುವ ಮೊದಲೇ ಮುಂಜಾಗ್ರತಾ ಕ್ರಮವಾಗಿ ಕೆಲವರು ಬೇರೆಡೆಗೆ ತೆರಳಲು ತೀರ್ಮಾನಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಸಾಗರ, ಹೊಸನಗರ, ಆನಂದಪುರದಲ್ಲಿ ಜೋರು ಮಳೆಯಾಗಿದೆ. ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದಲ್ಲಿ ಉತ್ತಮ ಮಳೆ ಸುರಿಯಿತು.

ಮನೆ ಹಸ್ತಾಂತರ ಇಂದು
ಕೊಡಗು ಜಿಲ್ಲೆಯಲ್ಲಿ 2018ರಲ್ಲಿ ಸಂಭವಿಸಿದ್ದ ಪ್ರಾಕೃತಿಕ ವಿಕೋಪದಲ್ಲಿ ಸಂತ್ರಸ್ತರಾಗಿದ್ದವರಿಗೆ ಎರಡು ವರ್ಷಗಳ ನಂತರ ಸೂರು ಸಿಗುತ್ತಿದೆ. ಜೂನ್‌ 4ರಂದು 463 ಮನೆಗಳನ್ನು ಹಸ್ತಾಂತರಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.