ಬೆಂಗಳೂರು: 2021 ಕ್ಕೂ ಮುನ್ನ ಅನುಮತಿ ಪಡೆದನರ್ಸಿಂಗ್ ಕಾಲೇಜು ಗಳ ಮಾನ್ಯತೆ ಮತ್ತು ಅನುದಾನದ ಬಗ್ಗೆ ಪರಿಶೀಲನೆ ನಡೆಸಲು ಜಂಟಿ ಸದನ ಸಮಿತಿ ರಚಿಸುವ ವಿಧಾನಪರಿಷತ್ ಸಚಿವಾಲಯದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಈ ಕುರಿತ ಅರ್ಜಿಗಳನ್ನು ನ್ಯಾಯಮೂರ್ತಿ ಎಸ್. ಸುನಿಲ್ ದತ್ ಯಾದವ್ ಅವರಿದ್ದ ರಜಾಕಾಲದ ವಿಶೇಷ ನ್ಯಾಯಪೀಠ ವಿಚಾರಣೆ ನಡೆಸಿತು. ‘2021 ಕ್ಕೂ ಹಿಂದೆ ಆರಂಭ ವಾಗಿ ರುವ ನರ್ಸಿಂಗ್ ಕಾಲೇಜುಗಳ ಕುರಿತಂತೆ ಪರಿಶೀಲನೆ ನಡೆಸಲು ರಚಿಸಲಾಗಿರುವ ಜಂಟಿ ಸದನ ಸಮಿತಿಗೆ ತಡೆ ನೀಡಿದ ನ್ಯಾಯಪೀಠ, ಶಾಸಕಾಂಗದ ಅಧಿಕಾರಕ್ಕೆ ಸಂಬಂಧಿಸಿದಂತೆ ಕಾಯ್ದೆಯನ್ನು ಪುನರ್ ಪರಿಶೀಲಿಸುವ ಅಗತ್ಯವಿದೆ’ ಎಂದಿದೆ.
ಕರ್ನಾಟಕ ನರ್ಸಿಂಗ್ ಮತ್ತು ಆರೋಗ್ಯ ವಿಜ್ಞಾನಗಳ ನಿರ್ವಹಣೆಯ ರಾಜ್ಯ ಒಕ್ಕೂಟ, ಹೈದರಾಬಾದ್- ಕರ್ನಾಟಕ ನರ್ಸಿಂಗ್ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್ ಮತ್ತು ಕರ್ನಾಟಕ ನರ್ಸಿಂಗ್ ಸಂಸ್ಥೆಗಳ ಮ್ಯಾನೇಜ್‌ಮೆಂಟ್ ಈ ಅರ್ಜಿ ಸಲ್ಲಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.