ADVERTISEMENT

ಹಿಂದಿ ವಿಚಾರ: ‘ಸಭೆಯ ನಂತರ ನಿಲುವು ಪ್ರಕಟ’- ಚಂದ್ರಶೇಖರ ಕಂಬಾರ 

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2019, 11:00 IST
Last Updated 15 ಸೆಪ್ಟೆಂಬರ್ 2019, 11:00 IST
   

ಬೆಂಗಳೂರು: ‘ಕೇಂದ್ರ ಸಾಹಿತ್ಯ ಅಕಾಡೆಮಿಯಲ್ಲಿ ಎಲ್ಲ ಭಾಷೆಯ ಸಾಹಿತಿಗಳಿದ್ದಾರೆ. ಯಾವುದೇ ಭಾಷೆಯ ಅಳಿವು, ಉಳಿವಿನ ಪ್ರಶ್ನೆ ಇಲ್ಲ. ಎಲ್ಲ ಭಾಷೆಗಳೂ ಉಳಿಯಬೇಕು. ಅಕಾಡೆಮಿಯ ಸಭೆ ಕರೆದು 22 ಭಾಷೆಗಳ ಸದಸ್ಯರ ಜೊತೆ ಚರ್ಚಿಸಿದ ನಂತರ ನಮ್ಮ ನಿಲುವು ತಿಳಿಸುತ್ತೇವೆ’ ಎಂದು ಅಕಾಡೆಮಿಯ ಅಧ್ಯಕ್ಷ ಚಂದ್ರಶೇಖರ ಕಂಬಾರ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರಾದೇಶಿಕ ಭಾಷೆಗಳು ಉಳಿಯಬೇಕು. ಹಿಂದೆ ನಾನು ಮತ್ತು ಎಸ್.ಎಲ್.ಭೈರಪ್ಪ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದೆವು. ಈ ಬಗ್ಗೆ ಚರ್ಚೆ ಮಾಡಿದ್ದೆವು. ಪ್ರಾದೇಶಿಕ ಭಾಷೆಗಳ ಉಳಿವಿಗೆ ಶ್ರಮಿಸಲಾಗುವುದು ಎಂದು ಮೋದಿ ಕೂಡ ಮಾತು ಕೊಟ್ಟಿದ್ದರು. ಆರ್.ಎಸ್.ಎಸ್. ಕೂಡ ಮಾತೃಭಾಷೆ ಶಿಕ್ಷಣದ ಮಾಧ್ಯಮವಾಗಬೇಕು ಎಂದು ಹೇಳಿದೆ. ಆದರೆ, ಈಗ ಮತ್ತೆ ಹಿಂದಿ ವಿಚಾರ ಚರ್ಚೆಗೆ ಬಂದಿದೆ. ಸಭೆಯ ನಂತರ ಈ ಬಗ್ಗೆ ಪ್ರತಿಕ್ರಿಯಿಸಲಾಗುವುದು’ ಎಂದು ಅವರು ಹೇಳಿದರು.

ಇನ್ನಷ್ಟು...

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.