ಹಿರೇಕೆರೂರು: ಕುತೂಹಲ ಕೆರಳಿಸಿದ್ದ ಹಿರೇಕೆರೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್29,067 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ.
ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಬನ್ನಿಕೋಡಅವರು 56,495 ಮತಗಳನ್ನು ಪಡೆಯುವ ಮೂಲಕ ಎರಡನೇ ಸ್ಥಾನ ಪಡೆದರು. ಮತ ಎಣಿಕೆ ಆರಂಭದಿಂದಲೂ ಬಿ.ಸಿ.ಪಾಟೀಲ್ ಮುನ್ನಡೆ ಕಾಯ್ದುಕೊಂಡಿದ್ದರು. ಪ್ರತಿ ಸುತ್ತಿನಲ್ಲೂ 2 ರಿಂದ 3 ಸಾವಿರ ಮತಗಳ ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು ವಿಶೇಷವಾಗಿತ್ತು.
ಹಿರೇಕೆರೂರಿನಲ್ಲಿಬಿ.ಸಿ.ಪಾಟೀಲ 85,562 ಮತಗಳನ್ನು ಪಡೆದು 29 ಸಾವಿರ ಮತಗಳ ಅಂತರದಲ್ಲಿ ಗೆಲುವು ಪಡೆದಿದ್ದಾರೆ. ಈ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿರಲಿಲ್ಲ.
ಪ್ರಜಾಕೀಯ ಪಕ್ಷದ ಅಭ್ಯರ್ಥಿ 597 ಮತಗಳನ್ನು ಪಡೆದಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಚುನಾವಣೆ ಪ್ರಚಾರದ ಸಮಯದಲ್ಲಿ ಬಿ.ಸಿ.ಪಾಟೀಲ್ ಅವರನ್ನು ಮಂತ್ರಿ ಮಾಡುತ್ತೇವೆ ಎಂದು ಹೇಳುತ್ತ ಬಂದಿದ್ದರು.
ಅಭ್ಯರ್ಥಿ | ಪಕ್ಷ | ಪಡೆದ ಮತಗಳು |
ಬಿ.ಸಿ.ಪಾಟೀಲ | ಬಿಜೆಪಿ | 85,562 |
ಬಿ.ಎಚ್.ಬನ್ನಿಕೋಡ | ಕಾಂಗ್ರೆಸ್ | 56,495 |
ದೇವೇಂದ್ರಪ್ಪ | ಉತ್ತಮ ಪ್ರಜಾಕೀಯ ಪಕ್ಷ | 597 |
ಮಂಜುನಾಥ ಜಿ.ಎಸ್ | ಕರ್ನಾಟಕ ರಾಷ್ಟ್ರ ಸಮಿತಿ | 193 |
ಹರೀಶ ಎಸ್.ಇಂಗಳಗೊಂದಿ | ಕರ್ನಾಟಕ ಜನತಾ ಪಕ್ಷ | 182 |
ಉಜನಪ್ಪ ಜೆ.ಕೋಡಿಹಳ್ಳಿ | ಪಕ್ಷೇತರ | 275 |
ರಾಜಶೇಖರ ಕೆ.ದುದಿಹಳ್ಳಿ | ಪಕ್ಷೇತರ | 133 |
ರುದ್ರಯ್ಯ ಸಾಲಿಮಠ | ಪಕ್ಷೇತರ | 356 |
ಪೂಜಾರ ಕಲ್ಲಪ್ಪ | ಪಕ್ಷೇತರ | 472 |
ಹಿರೇಕೆರೂರು ಕ್ಷೇತ್ರದ ಮತದಾನದ ವಿವರ
ಒಟ್ಟು ಮತದಾರರು;1,83,481
ಮತ ಚಲಾಯಿಸಿದವರು;1,44,265
ನೋಟಾ;789
ತಿರಸ್ಕೃತ ಮತಗಳು;9
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.