ADVERTISEMENT

ವಿಡಿಯೊ ಸುದ್ದಿ: ಲಾಕ್‌ಡೌನ್ ಪರಿಣಾಮ ಕುಡಿತ ಬಿಟ್ಟ ‘ಹೌದೋ ಹುಲಿಯಾ’

​ಪ್ರಜಾವಾಣಿ ವಾರ್ತೆ
Published 2 ಮೇ 2020, 2:22 IST
Last Updated 2 ಮೇ 2020, 2:22 IST
ಪೀರಪ್ಪ ಕಟ್ಟೀಮನಿ
ಪೀರಪ್ಪ ಕಟ್ಟೀಮನಿ   

ಬೆಂಗಳೂರು: ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರ ಚುನಾವಣಾ ಪ್ರಚಾರ ಭಾಷಣದ ವೇಳೆ ‘ಹೌದೋ ಹುಲಿಯಾ’ ಎನ್ನುವ ಮೂಲಕ ರಾಜ್ಯದಾದ್ಯಂತ ಮನೆಮಾತಾಗಿದ್ದ ಪೀರಪ್ಪ ಕಟ್ಟೀಮನಿ ಈಗ ಕುಡಿತ ಬಿಟ್ಟಿದ್ದಾರಂತೆ!

ಕೊರೊನಾ ಲಾಕ್‌ಡೌನ್‌ ಪರಿಣಾಮವಾಗಿ ಸಾವಿರಾರು ಜನ ಕುಡಿತ ಬಿಟ್ಟು ಆರೋಗ್ಯವಾಗಿದ್ದಾರೆ. ನಾವೂ ನೆಮ್ಮದಿಯ ಜೀವನ ಸಾಗಿಸುತ್ತಿದ್ದೇವೆ. ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುತ್ತಿದ್ದೇವೆ ಎಂದು ಪೀರಪ್ಪ ಕಟ್ಟೀಮನಿ ವಿಡಿಯೊವೊಂದರಲ್ಲಿ ಹೇಳಿದ್ದಾರೆ.

2019ರ ಡಿಸೆಂಬರ್‌ನಲ್ಲಿ ಸಿದ್ದರಾಮಯ್ಯ ಕಾಗವಾಡದಲ್ಲಿ ಉಪಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದಾಗ ‘ಇಂದಿರಾಗಾಂಧಿ ದೇಶಕ್ಕೋಸ್ಕರ ಪ್ರಾಣ ತೆತ್ತರು’ ಎನ್ನುತ್ತಿದ್ದಂತೆಯೇ, ಜನರ ಸಾಲಿನಲ್ಲಿದ್ದ ಪೀರಪ್ಪ ‘ಹೌದೋ ಹುಲಿಯಾ’ ಎಂದಿದ್ದರು. ಇದು ದೃಶ್ಯ ಮಾಧ್ಯಮಗಳಲ್ಲಿ, ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಬಳಿಕ ಸಿದ್ದರಾಮಯ್ಯ ಹೃದಯದ ಚಿಕಿತ್ಸೆಗೆ ಒಳಗಾಗಿ ವಿಶ್ರಾಂತಿ ಪಡೆಯುತ್ತಿರುವ ವೇಳೆ ಅವರನ್ನು ಭೆಟಿಯಾಗಿ ಆರೋಗ್ಯವನ್ನೂ ವಿಚಾರಿಸಿದ್ದರು ಪೀರಪ್ಪ. ಈ ಕುರಿತು ಸಿದ್ದರಾಮಯ್ಯ ಅವರೇ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು.

ADVERTISEMENT

ಇನ್ನಷ್ಟು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.