ADVERTISEMENT

ಪ್ರವೀಣ್‌ ನೆಟ್ಟಾರು ಕನಸಿನ ಮನೆ ನಿರ್ಮಾಣ: ಬಂಧುಗಳೊಂದಿಗೆ ನಳಿನ್‌ ಕುಮಾರ್ ಚರ್ಚೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2022, 6:30 IST
Last Updated 13 ಸೆಪ್ಟೆಂಬರ್ 2022, 6:30 IST
ಪ್ರವೀಣ್‌ ನೆಟ್ಟಾರು ಅವರ ಕುಟುಂಬಸ್ಥರ ಜೊತೆ ನಳಿನ್‌ ಕುಮಾರ್ ಕಟೀಲ್‌ ಅವರು ತಮ್ಮ ತಾಯಿ ಮನೆ ಕುಂಜಾಡಿಯಲ್ಲಿ ಸಮಾಲೋಚನೆ ನಡೆಸಿದರು. ಪ್ರವೀಣ್‌ ಅವರ ತಂದೆ ಶೇಖರ ಪೂಜಾರಿ, ಬಂಧು ರಂಜಿತ್‌, ಪ್ರವೀಣ್‌ ಅವರ ಪತ್ನಿ ನೂತನಾ ಹಾಗೂ ಇತರರು ಇದ್ದಾರೆ
ಪ್ರವೀಣ್‌ ನೆಟ್ಟಾರು ಅವರ ಕುಟುಂಬಸ್ಥರ ಜೊತೆ ನಳಿನ್‌ ಕುಮಾರ್ ಕಟೀಲ್‌ ಅವರು ತಮ್ಮ ತಾಯಿ ಮನೆ ಕುಂಜಾಡಿಯಲ್ಲಿ ಸಮಾಲೋಚನೆ ನಡೆಸಿದರು. ಪ್ರವೀಣ್‌ ಅವರ ತಂದೆ ಶೇಖರ ಪೂಜಾರಿ, ಬಂಧು ರಂಜಿತ್‌, ಪ್ರವೀಣ್‌ ಅವರ ಪತ್ನಿ ನೂತನಾ ಹಾಗೂ ಇತರರು ಇದ್ದಾರೆ   

ಮಂಗಳೂರು: ದುಷ್ಕರ್ಮಿಗಳಿಂದ ಹತ್ಯೆಗೊಳಗಾಗಿರುವ ಬಿಜೆಪಿ ಜಿಲ್ಲಾ ಯುವಮೋರ್ಚಾ ಕಾರ್ಯಕಾರಣಿ ಪ್ರವೀಣ್ ನೆಟ್ಟಾರು ಅವರ ಮನೆ ನಿರ್ಮಾಣದ ಕನಸನ್ನು ನನಸು ಮಾಡುವ ಕುರಿತು ಅವರ ಕುಟುಂಬಸ್ಥರ ಜೊತೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಸಮಾಲೋಚನೆ ನಡೆಸಿದರು.

ಕಡಬ ತಾಲ್ಲೂಕಿನ ಪಾಲ್ತಾಡಿ ಗ್ರಾಮದ ಕುಂಜಾಡಿಯಲ್ಲಿರುವ ತಮ್ಮ ತಾಯಿ ಮನೆಗೆ ನಳಿನ್‌ ಕುಮಾರ್‌ ಕಟೀಲ್‌ ಅವರು ಪ್ರವೀಣ್ ನೆಟ್ಟಾರು ಅವರ ಕುಟುಂಬಸ್ಥರನ್ನು ಭಾನುವಾರ ಕರೆಸಿಕೊಂಡುಮನೆನಿರ್ಮಾಣದವಿಚಾರದಲ್ಲಿ ಚರ್ಚಿಸಿದರು.

‘ಪಕ್ಷ ಹಾಗೂ ಸಂಘ ಪರಿವಾರದ ವತಿಯಿಂದ ಹೊಸ ಮನೆಯನ್ನು ಕಟ್ಟಿಸಿಕೊಂಡುವುದಾಗಿ ನಳಿನ್ ಅವರು ಭರವಸೆ ನೀಡಿದ್ದಾರೆ. ಈ ಕುರಿತು ಅವರು ನಮ್ಮ ಕುಟುಂಬದವರ ಜೊತೆ ಸಮಾಲೋಚನೆ ನಡೆಸಿದ್ದಾರೆ. ಪ್ರವೀಣ್‌ ಅವರ ತಂದೆ ಶೇಖರ ಪೂಜಾರಿ, ತಾಯಿರತ್ನಾವತಿ, ಪತ್ನಿ ನೂತನಾ ಹಾಗೂ ಕುಟುಂಬದ ಇತರ ಪ್ರಮುಖರ ಜೊತೆ ಅವರು ಚರ್ಚಿಸಿದ್ದಾರೆ’ ಎಂದು ಪ್ರವೀಣ್‌ ಅವರ ಹತ್ತಿರದ ಬಂಧು ರಂಜಿತ್‌ ಅವರು ‘ಪ್ರಜಾವಾಣಿ‘ಗೆ ತಿಳಿಸಿದರು.

ADVERTISEMENT

‘ನೆಟ್ಟಾರುವಿನಲ್ಲಿ ಈಗಿರುವ ಮನೆಯ ಸಮೀಪದಲ್ಲೇ ಹೊಸ ಮನೆಯನ್ನು ನಿರ್ಮಿಸುವುದು ಪ್ರವೀಣ್‌ ಅವರ ಕನಸಾಗಿತ್ತು. ಅದೇ ಜಾಗದಲ್ಲಿ ಮನೆ ನಿರ್ಮಾಣ ಆಗಬೇಕೆಂಬುದು ಕುಟುಂಬದವರ ಆಶಯವೂ ಆಗಿದೆ. ಅಲ್ಲೇ ಮನೆ ನಿರ್ಮಿಸುವ ಬಗ್ಗೆ ಸಮಾಲೋಚನೆ ನಡೆದಿದೆ’ ಎಂದರು.

ಪ್ರವೀಣ್ ಪತ್ನಿಗೆ ಉದ್ಯೋಗ:ಪ್ರವೀಣ್‌ ಅವರ ಪತ್ನಿ ನೂತನ ಅವರಿಗೆ ಮುಖ್ಯಮಂತ್ರಿ ಅವರ ಕಚೇರಿಯಲ್ಲಿ ಕಾಯಂ ಉದ್ಯೋಗ ನೀಡುವುದಾಗಿ ಬಿಜೆಪಿ ವತಿಯಿಂದ ದೊಡ್ಡಬಳ್ಳಾಪುರದಲ್ಲಿ ಶನಿವಾರ ಏರ್ಪಡಿಸಿದ್ದ ’ಜನಸ್ಪಂದನ’ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದ್ದರು. ಈ ಬಗ್ಗೆಯೂ ನಳಿನ್‌ ಅವರು ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ.

‘ನೂತನಾ ಅವರಿಗೆ ಮುಖ್ಯಮಂತ್ರಿಯವರ ಕಚೇರಿಯಲ್ಲಿ ಸರ್ಕಾರಿ ಕೆಲಸ ನೀಡುವ ಬಗ್ಗೆ ಸರ್ಕಾರದಿಂದ ಅಧಿಕೃತವಾಗಿ ಯಾವುದೇ ಮಾಹಿತಿ ಬಂದಿಲ್ಲ. ಆದರೆ, ಈ ಬಗ್ಗೆ ಸರ್ಕಾರ ತೀರ್ಮಾನ ಕೈಗೊಂಡಿರುವ ಬಗ್ಗೆ ನಳಿನ್‌ ಅವರು ಮಾಹಿತಿ ನೀಡಿದ್ದಾರೆ’ ಎಂದು ಪ್ರವೀಣ್‌ ಅವರ ಹತ್ತಿರದ ಬಂಧುವೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.