ಮೆಟ್ರೊ ರೈಲು ನಿಲ್ದಾಣಗಳಲ್ಲಿ ಟಿಕೆಟ್‌ಗಾಗಿ(ಟೋಕನ್) ಇನ್ನು ಸಾಲುಗಟ್ಟಿ ನಿಲ್ಲುವ ಅಗತ್ಯವಿಲ್ಲ. ಕ್ಯೂಆರ್(ಕ್ವಿಕ್ ರೆಸ್ಪಾನ್ಸ್) ಕೋಡ್ ಟಿಕೆಟ್ ಖರೀದಿ ವ್ಯವಸ್ಥೆಯನ್ನು ಬೆಂಗಳೂರು ಮೆಟ್ರೊ ರೈಲು ನಿಗಮವು(ಬಿಎಂಆರ್‌ಸಿಎಲ್) ಕನ್ನಡ ರಾಜ್ಯೋತ್ಸವದ ದಿನದಂದು ಮಂಗಳವಾರ ಅಧಿಕೃತವಾಗಿ ಪರಿಚಯಿಸುತ್ತಿದೆ.
ಪ್ರಯಾಣ ಆರಂಭಿಸುವ ನಿಲ್ದಾಣ ಮತ್ತು ತಲುಪಬೇಕಾದ ನಿಲ್ದಾಣಗಳನ್ನು ನಮೂದಿಸಿ ಆನ್‌ಲೈನ್‌ನಲ್ಲೇ ದರ ಪಾವತಿಸಿದರೆ ಕ್ಯೂಆರ್ ಕೋಡ್ ಸೃಷ್ಟಿಯಾಗುತ್ತದೆ. ಈ ಕ್ಯೂಆರ್ ಕೋಡ್‌ಗಳನ್ನು ಸ್ಕ್ಯಾನ್ ಮಾಡಲು ಎಲ್ಲಾ ಮೆಟ್ರೊ ನಿಲ್ದಾಣಗಳ ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ಸ್ಕ್ಯಾನಿಂಗ್ ಉಪಕರಣಗಳನ್ನು ಅಳವಡಿಸಲಾಗಿದೆ. ಆ ಉಪಕರಣಕ್ಕೆ ಮೊಬೈಲ್ ಫೋನ್‌ನಲ್ಲಿ ಇರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ಗೇಟ್ ತೆರೆದುಕೊಳ್ಳುತ್ತದೆ. ನಿರ್ಗಮನ ಸಂದರ್ಭದಲ್ಲೂ ಸ್ಕ್ಯಾನ್ ಮಾಡಿ ಹೊರಗೆ ಹೋಗಬಹುದು.
ದೇಶದಲ್ಲೇ ಮೊದಲು: ಆ್ಯಂಡ್ರಾಯ್ಡ್ ಫೋನ್‌ನಲ್ಲಿ ಪ್ಲೇಸ್ಟೋರ್‌ನಿಂದ ‘ನಮ್ಮ ಮೆಟ್ರೊ’ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ನೋಂದಾಯಿಸಿಕೊಳ್ಳಬಹುದು. ಬಿಎಂಆರ್‌ಸಿಎಲ್‌ನ ವ್ಯಾಟ್ಸ್‌ಆ್ಯಪ್ ಸಂಖ್ಯೆ (8105556677) ಸೇವ್ ಮಾಡಿಕೊಂಡು ‘ಹಾಯ್’ ಎಂಬ ಸಂದೇಶ ಕಳುಹಿಸುವ ಮೂಲಕವೂ ಕ್ಯೂಆರ್ ಟಿಕೆಟ್ ಖರೀದಿಸಲು ಚಾಟ್‌ಬಾಟ್‌ನೊಂದಿಗೆ ಸಂವಹನ ಮಾಡಬಹುದು.
ಆ್ಯಂಡ್ರಾಯ್ಡ್ ಮತ್ತು ಐಓಸ್ ಮೊಬೈಲ್ ದೂರವಾಣಿ ಬಳಕೆದಾರರಿಗೆ ಚಾಟ್‌ಬಾಟ್ ಕನ್ನಡ ಮತ್ತು ಆಂಗ್ಲ ಎರಡೂ ಭಾಷೆಗಳಲ್ಲಿ ಲಭ್ಯವಿದೆ. ಈ ರೀತಿಯ ವ್ಯವಸ್ಥೆ ಜಾರಿಗೆ ತಂದಿರುವುದು ದೇಶದಲ್ಲೇ ಮೊದಲು’ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಚಾನೆಲ್ ನೋಡಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.