ADVERTISEMENT

ಎಚ್‌ಎಸ್‌ಆರ್‌ಪಿ ಗಡುವು: ಮತ್ತೆ 3 ತಿಂಗಳು ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2024, 16:06 IST
Last Updated 14 ಫೆಬ್ರುವರಿ 2024, 16:06 IST
<div class="paragraphs"><p> ನಂಬರ್‌ ಪ್ಲೇಟ್‌ </p></div>

ನಂಬರ್‌ ಪ್ಲೇಟ್‌

   

–ಪ್ರಜಾವಾಣಿ ಚಿತ್ರ/ ಅನೂಪ್‌ ರಾಘ.ಟಿ

ಬೆಂಗಳೂರು: ವಾಹನಗಳಿಗೆ ಅತಿ ಸುರಕ್ಷತಾ ನೋಂದಣಿ ಫಲಕ (ಎಚ್‌ಎಸ್‌ಆರ್‌ಪಿ) ಅಳವಡಿಸಲು ನಿಗದಿ ಮಾಡಿದ್ದ ಅವಧಿಯನ್ನು ಮತ್ತೆ ಮೂರು ತಿಂಗಳು ವಿಸ್ತರಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.

ADVERTISEMENT

ವಿಧಾನಪರಿಷತ್ತಿನಲ್ಲಿ ಕಾಂಗ್ರೆಸ್‌ನ ಮಧು ಜಿ. ಮಾದೇಗೌಡ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಆದೇಶದಂತೆ 2019ರ ಏಪ್ರಿಲ್‌ಗಿಂತ ಮೊದಲು ನೋಂದಣಿಯಾದ ವಾಹನಗಳಿಗೆ ಸುರಕ್ಷತಾ ನೋಂದಣಿ ಫಲಕ ಅಳವಡಿಸಲಾಗುತ್ತಿದೆ. ವಾಹನಗಳನ್ನು ಬಳಸಿಕೊಂಡು ಎಸಗುವ ಅಪರಾಧಗಳನ್ನು ತಡೆಯಲು, ವಾಹನಗಳನ್ನು ಖಚಿತವಾಗಿ ಗುರುತಿಸಲು ಈ ಫಲಕಗಳು ಸಹಕಾರಿಯಾಗಿವೆ ಎಂದರು.

ರಾಜ್ಯದಲ್ಲಿ 2019ರ ಏಪ್ರಿಲ್‌ಗೂ ಮೊದಲು 2.45 ಕೋಟಿ ವಾಹನಗಳು ನೋಂದಣಿಯಾಗಿವೆ. ಅವುಗಳಲ್ಲಿ 18.32 ಲಕ್ಷ ವಾಹನಗಳಷ್ಟೇ ಎಚ್‌ಎಸ್‌ಆರ್‌ಪಿ ಫಲಕ ಅಳವಡಿಸಿಕೊಂಡಿವೆ. ಶೇ 9.16ರಷ್ಟು ಸಾಧನೆಯಾಗಿದೆ. ಶೇ 90ಕ್ಕೂ ಹೆಚ್ಚು ವಾಹನಗಳು ಬಾಕಿ ಇವೆ. ಫಲಕ ಅಳವಡಿಕೆಗೆ ನೀಡಿದ್ದ ಅವಧಿ ಇದೇ ಫೆ.17ಕ್ಕೆ ಕೊನೆಗೊಳ್ಳಲಿದ್ದು, ಮತ್ತೆ ವಿಸ್ತರಿಸಲು ನಿರ್ಧಿಸಲಾಗಿದೆ. ನಂತರ ದಂಡ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.