ನವದೆಹಲಿ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಮೂಲಕ ಹಾದು ಹೋಗುವ ಹುಬ್ಬಳ್ಳಿ–ಅಂಕೋಲಾ ರೈಲು ಮಾರ್ಗ ಸೇರಿದಂತೆ ನಾಲ್ಕು ಯೋಜನೆಗಳನ್ನು ಶೀಘ್ರ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ತಾಳಗುಪ್ಪ–ಶಿರಸಿ–ಹುಬ್ಬಳ್ಳಿ, ತಾಳಗುಪ್ಪ–ಹೊನ್ನಾವರ, ಧಾರವಾಡ–ಕಿತ್ತೂರು–ಹುಬ್ಬಳ್ಳಿ ರೈಲು ಯೋಜನೆಗಳನ್ನು ಶೀಘ್ರ ಪೂರ್ಣಗೊಳಿಸಬೇಕು. ವಾಸ್ಕೊ–ಬೆಳಗಾವಿ–ಮೀರಜ್ ನಡುವೆ ಹೊಸ ಪ್ರಯಾಣಿಕ ರೈಲು ಆರಂಭಿಸಬೇಕು. ಕ್ಯಾಸಲ್‌ರಾಕ್–ಮೀರಜ್–ಕ್ಯಾಸಲ್‌ರಾಜ್ ಪ್ರಯಾಣಿಕ ರೈಲನ್ನು ಮತ್ತೆ ಆರಂಭಿಸಬೇಕು. ಕುಮಟಾ ಹಾಗೂ ಗೋಕರ್ಣ ರೈಲು ನಿಲ್ದಾಣಗಳಲ್ಲಿ ಎರಡನೇ ಪ್ಲಾಟ್‌ಫಾರಂ ಆರಂಭಿಸಬೇಕು. ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳದಲ್ಲಿ ಪ್ರಯಾಣಿಕರಿಗೆ ರಿಸರ್ವೇಶನ್ ಟಿಕೆಟ್‌ಗಳನ್ನು ಹೆಚ್ಚಿಸಬೇಕು ಎಂದು ಅವರು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.