ರಾಮನಗರ: ‘ ಕುಮಾರಸ್ವಾಮಿ ಅವರನ್ನು ನಾನು ಯಾವಾಗಲೂ ಪ್ರೀತಿಯಿಂದ ‘ಕರಿಯಣ್ಣ’ ಎಂದೇ ಕರೆಯುವೆ. ಕುಳ್ಳಗಿರುವ ನನ್ನನ್ನು ಅವರು ಯಾವಾಗಲೂ ‘ಕುಳ್ಳ’ ಎನ್ನುತ್ತಾರೆ. ಹಾಗಾಗಿ, ನೆನ್ನೆ ಭಾಷಣ ಮಾಡುವಾಗ ಅವರನ್ನು ಕರಿಯಣ್ಣ ಎಂದಿದ್ದೇನೆಯೇ ಹೊರತು, ಬಣ್ಣದ ಆಧಾರದ ಮೇಲೆ ಜನಾಂಗೀಯ ನಿಂದನೆ ಮಾಡಿಲ್ಲ’ ಎಂದು ವಸತಿ ಜಮೀರ್ ಅಹಮದ್ ಖಾನ್ ಹೇಳಿದರು.
ಚನ್ನಪಟ್ಟಣದಲ್ಲಿ ಭಾನುವಾರ ರಾತ್ರಿ ನಡೆದ ಕಾಂಗ್ರೆಸ್ ಪ್ರಚಾರಸಭೆಯಲ್ಲಿ ಭಾಷಣ ಮಾಡುವಾಗ ಕುಮಾರಸ್ವಾಮಿ ಅವರನ್ನು ‘ಕರಿಯ’ ಎಂದು ಕರೆದಿರುವುದು ಸುದ್ದಿಯಾಗುತ್ತಿದ್ದಂತೆ, ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಮ್ಮ ಮಾತಿನ ಕುರಿತು ಮಾಧ್ಯಮದವರಿಗೆ ಅವರು ಸ್ಪಷ್ಟನೆ ನೀಡಿದರು.
‘ಮುಂಚೆಯಿಂದಲೂ ಅವರನ್ನು ಹಾಗೆಯೇ ಕರೆದು ಅಭ್ಯಾಸವಿರುವುದರಿಂದ, ನಿನ್ನೆಯ ಭಾಷಣದಲ್ಲೂ ಹಾಗೆಯೇ ಕರೆದಿರುವೆ. ನಾವಿಬ್ಬರು ಬೇರೆ ಪಕ್ಷದಲ್ಲಿದ್ದರೂ ನಮ್ಮ ಸ್ನೇಹ ಅಳಿಯುವುದಿಲ್ಲ. ಹಳೆಯದ್ದನ್ನು ಮರೆಯುವುದಕ್ಕೆ ಆಗುವುದಿಲ್ಲ. ನಾನೀಗ ಕಾಂಗ್ರೆಸ್‌ನಲ್ಲಿದ್ದರೂ, ನನ್ನ ರಾಜಕೀಯ ಗುರು ಎಚ್.ಡಿ. ದೇವೇಗೌಡರು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.