ಬೆಂಗಳೂರು: ವೈಯಕ್ತಿಕವಾಗಿ ಟಿಪ್ಪು ಜಯಂತಿ ಆಚರಣೆಗೆ ನನ್ನ ವಿರೋಧವಿದೆ. ಟಿಪ್ಪು ಜಯಂತ್ಯೋತ್ಸವ ಮಾಡಲಿ ಬಿಡಲಿ ಅದು ಸರ್ಕಾರಕ್ಕೆ ಬಿಟ್ಟದ್ದು. ಆದರೆ ಇಲ್ಲಿ ಪ್ರಶ್ನೆ ಇರೋದು ಪಠ್ಯದಲ್ಲಿ ಟಿಪ್ಪು ಇತಿಹಾಸ ಕಿತ್ತು ಹಾಕೋದು.
‘ಆದಿಲ್‌ಶಾಹಿ, ಹೈದರಾಲಿಯ ಇತಿಹಾಸ ಕಿತ್ತು ಹಾಕ್ತಾರಾ. ಹಾಗಿದ್ದರೆ ಎಲ್ಲಿಂದ ಎಲ್ಲಿಗೆ ಇತಿಹಾಸ ತೆಗೆಯುತ್ತೇವೆ ಎಂಬುದನ್ನು ಬಿಜೆಪಿಯವರು ಹೇಳಬೇಕು. ಏಕೆಂದರೆ ಬ್ರಿಟಿಷರ ವಿರುದ್ಧ ಮೊದಲು ಹೋರಾಟ ಮಾಡಿದ್ದು ಟಿಪ್ಪು. ರಾಷ್ಟ್ರ ಉಳಿಸಿಕೊಳ್ಳಲು ಮಕ್ಕಳನ್ನು ಅಡವಿಟ್ಟ ತ್ಯಾಗಿ ಟಿಪ್ಪು‘ ಎಂದು ಬಣ್ಣಿಸಿದ ಅವರು, ‘ಸ್ವಾತಂತ್ರ್ಯ ಹೋರಾಟದಲ್ಲಿ ಟಿಪ್ಪು ಇತಿಹಾಸ ಅವಿಭಾಜ್ಯ ಅಂಗವಾಗಿದೆ. ಮತೀಯತೆ ಆಧಾರದ ಮೇಲೆ ಇತಿಹಾಸ ಬರೆಯುವ ಪ್ರವೃತ್ತಿಯ ದುರಂತ ಪ್ರಜಾಪ್ರಭುತ್ವದಲ್ಲಿ ಮತ್ತೊಂದಿಲ್ಲ‘ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.