ADVERTISEMENT

ಐಸಿಎಸ್‌ಇ 10ನೇ ತರಗತಿ ಫಲಿತಾಂಶ: ಬೆಂಗಳೂರಿನ 3 ವಿದ್ಯಾರ್ಥಿಗಳಿಗೆ ಶೇ 99.80 ಅಂಕ

​ಪ್ರಜಾವಾಣಿ ವಾರ್ತೆ
Published 6 ಮೇ 2024, 16:15 IST
Last Updated 6 ಮೇ 2024, 16:15 IST
<div class="paragraphs"><p>ಪರೀಕ್ಷೆ–ಪ್ರಾತಿನಿಧಿಕ ಚಿತ್ರ</p></div>

ಪರೀಕ್ಷೆ–ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ಐಸಿಎಸ್‌ಇಯ 10ನೇ ತರಗತಿ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಬೆಂಗಳೂರಿನ ಮೂವರು ವಿದ್ಯಾರ್ಥಿಗಳು ಶೇ 99.80ರಷ್ಟು ಅಂಕ ಗಳಿಕೆಯ ಮೂಲಕ ಉತ್ತಮ ಸಾಧನೆ ತೋರಿದ್ದಾರೆ.

ಗ್ರೀನ್‌ವುಡ್‌ ಹೈಸ್ಕೂಲ್‌ನ ಆದ್ರಿತಾ ತ್ರಿಪಾಠಿ, ಬೆಥನಿ ಹೈಸ್ಕೂಲ್‌ನ ಮೆಹೆರ್ ಎಫ್‌. ಅನ್ಸಿಲ್‌ ಮತ್ತು ಬಿಷಪ್‌ಕಾಟನ್‌ ಬಾಲಕರ ಹೈಸ್ಕೂಲ್‌ನ ಎಸ್‌.ವರುಣ್  ಸಾಧನೆ ತೋರಿದ್ದಾರೆ.

ADVERTISEMENT

ಐಸಿಎಸ್‌ಇ 10ನೇ ತರಗತಿ ಉತ್ತೀರ್ಣ ಪ್ರಮಾಣ ಶೇ 99.83. ಪರೀಕ್ಷೆಗೆ ಹಾಜರಾದ ಒಟ್ಟು 27,826  ವಿದ್ಯಾರ್ಥಿಗಳಲ್ಲಿ 27,779 ಮಂದಿ ಉತ್ತೀರ್ಣರಾಗಿದ್ದು, 47 ಮಂದಿ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ರಾಜ್ಯದ ಹಲವು ಶಾಲೆಗಳ ಫಲಿತಾಂಶ ಶೇ 100ರಷ್ಟಿದೆ. ಅವುಗಳಲ್ಲಿ ಆರ್ಕಿಡ್‌ ಇಂಟರ್‌ನ್ಯಾಷನಲ್ ಸ್ಕೂಲ್‌, ಸ್ವಾಮಿ ವಿವೇಕಾನಂದ ಸ್ಕೂಲ್‌, ಗ್ರೀನ್‌ವುಡ್‌ ಹೈಸ್ಕೂಲ್‌ ಪ್ರಮುಖವಾದವು.

ರಾಷ್ಟ್ರ ಮಟ್ಟದಲ್ಲಿ ಐಸಿಎಸ್‌ಇಯಲ್ಲಿ 1,734 ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಶೇ 99.42 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪರಿಶಿಷ್ಟ ಪಂಗಡದ 395 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಶೇ 99.49 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಹಿಂದುಳಿದ ವರ್ಗಕ್ಕೆ ಸೇರಿದ 11,693  ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಶೇ 99.79 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.