ADVERTISEMENT

ಜೆಡಿಎಸ್ ಅಧಿಕಾರಕ್ಕೆ ಬಂದರೆ ಸ್ತ್ರೀಶಕ್ತಿ ಸಾಲಮನ್ನಾ: ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2023, 21:46 IST
Last Updated 20 ಫೆಬ್ರುವರಿ 2023, 21:46 IST
ನೆಲಗದರನಹಳ್ಳಿಯ ಬಿಜೆಪಿ ಮುಖಂಡರಾದ ಕಾವ್ಯ ಹಾಗೂ ವೆಂಕಟೇಶ್ (ವೆಂಕಿ) ದಂಪತಿಯನ್ನು ಜೆಡಿಎಸ್‌ಗೆ ಎಚ್‌.ಡಿ. ಕುಮಾರಸ್ವಾಮಿ ಅವರು ಬರ ಮಾಡಿಕೊಂಡರು. ಶಾಸಕ ಆರ್. ಮಂಜುನಾಥ್, ಅಂದಾನಪ್ಪ, ಎಂ.ಮುನಿಸ್ವಾಮಿ, ಚರಣ್ ಗೌಡ, ರುದ್ರೇಗೌಡ, ಪದ್ಮಾವತಿ ನರಸಿಂಹಮೂರ್ತಿ, ಕೆಂಪ ಓಬಳಯ್ಯ ಹಾಜರಿದ್ದರು.
ನೆಲಗದರನಹಳ್ಳಿಯ ಬಿಜೆಪಿ ಮುಖಂಡರಾದ ಕಾವ್ಯ ಹಾಗೂ ವೆಂಕಟೇಶ್ (ವೆಂಕಿ) ದಂಪತಿಯನ್ನು ಜೆಡಿಎಸ್‌ಗೆ ಎಚ್‌.ಡಿ. ಕುಮಾರಸ್ವಾಮಿ ಅವರು ಬರ ಮಾಡಿಕೊಂಡರು. ಶಾಸಕ ಆರ್. ಮಂಜುನಾಥ್, ಅಂದಾನಪ್ಪ, ಎಂ.ಮುನಿಸ್ವಾಮಿ, ಚರಣ್ ಗೌಡ, ರುದ್ರೇಗೌಡ, ಪದ್ಮಾವತಿ ನರಸಿಂಹಮೂರ್ತಿ, ಕೆಂಪ ಓಬಳಯ್ಯ ಹಾಜರಿದ್ದರು.   

ಪೀಣ್ಯ ದಾಸರಹಳ್ಳಿ: ಜೆಡಿಎಸ್ ಅಧಿಕಾರಕ್ಕೆ ಬಂದರೆ ಸ್ತ್ರೀಶಕ್ತಿ ಸಂಘಗಳು ಪಡೆದಿರುವ ಸಾಲವನ್ನು ಸಂಪೂರ್ಣ ಮನ್ನಾ ಮಾಡಲಾಗುವುದು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.

ಜೆಡಿಎಸ್‌ಗೆ ಸೇರ್ಪಡೆಯಾದ ಕಾರ್ಯಕರ್ತರನ್ನು ಸ್ವಾಗತಿಸಿ ಮಾತನಾಡಿದ ಅವರು. ಜೆಡಿಎಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ 65 ವರ್ಷ ಮೇಲ್ಪಟ್ಟವರಿಗೆ ₹ 5,000 ಪಿಂಚಣಿ ಹಾಗೂ ವಿಧವಾ ವೇತನವನ್ನು ₹ 800ರಿಂದ ₹ 2,500ಕ್ಕೆ ಹೆಚ್ಚಿಸುವುದಾಗಿ ಭರವಸೆ ನೀಡಿದರು.

‘ದಾಸರಹಳ್ಳಿ ಅಭಿವೃದ್ಧಿ ಕಾಮಗಾರಿಗಳ ತಡೆಯುವಲ್ಲಿ ಸಚಿವ ಆರ್. ಅಶೋಕ ಅವರ ಕೈವಾಡ ಇದೆ ಎಂಬುದು ಗೊತ್ತಾಗಿದೆ. ಈ ಹಿಂದೆ ಗೆಲ್ಲಿಸಿದ್ದ ಜನರಿಗೆ ದ್ರೋಹ ಮಾಡುವಂತಹ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಇದಕ್ಕೆಲ್ಲಾ ಜನರು ಸರಿಯಾದ ಉತ್ತರ ಕೊಡಬೇಕಿದೆ’ ಎಂದು ಆರೋಪಿಸಿದರು.

ADVERTISEMENT

ಶಾಸಕ ಆರ್. ಮಂಜುನಾಥ್ ಮಾತನಾಡಿ, ‘ನೆಲಗದರನಹಳ್ಳಿ ರಸ್ತೆ ಸೇರಿದಂತೆ ಕ್ಷೇತ್ರದ ಅಭಿವೃದ್ಧಿಗೆ ಮಾಜಿ ಶಾಸಕ ಮುನಿರಾಜು ಅಡ್ಡಗಾಲು ಹಾಕುತ್ತಿದ್ದಾರೆ. ಕ್ಷೇತ್ರದ ಜನತೆ ಗಮನಿಸಬೇಕು’ ಎಂದರು.

ರಾಜ್ಯ ಉಪಾಧ್ಯಕ್ಷ ಅಂದಾನಪ್ಪ, ನಗರಸಭಾ ಮಾಜಿ ಸದಸ್ಯ ಗೋಪಾಲಕೃಷ್ಣ, ಕ್ಷೇತ್ರದ ಅಧ್ಯಕ್ಷ ಎಂ. ಮುನಿಸ್ವಾಮಿ, ಬಿಬಿಎಂಪಿ ಮಾಜಿ ಉಪ ಮೇಯರ್ ಪದ್ಮಾವತಿ ನರಸಿಂಹಮೂರ್ತಿ, ಮುಖಂಡರಾದ ಚರಣ್ ಗೌಡ, ಜಗದೀಶ್, ಪಾಪಣ್ಣ, ಕೆಂಪಹೋಬಳಯ್ಯ, ರುದ್ರೇಗೌಡ, ಹೆಗ್ಗನಹಳ್ಳಿ ಬ್ಲಾಕ್ ಅಧ್ಯಕ್ಷ ಎಚ್.ಜಿ. ಸುರೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.