ಬೆಂಗಳೂರು: ‘ನಾನು ಅವತ್ತೇ ಹೇಳಿದ್ದೆ, ನನ್ನ ಮಾತನ್ನು ಕೇಳಿದ್ದರೆ ಇಷ್ಟೆಲ್ಲ ಆಗುತ್ತಿತ್ತಾ? ಸಣ್ಣ ವಿಷಯಕ್ಕೆ ಇಷ್ಟೆಲ್ಲ ಆಗುತ್ತಿದೆ’ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೇಳಿದರು.
‘ರಮಣಶ್ರೀ ಶರಣ ಪ್ರಶಸ್ತಿ’ ಸಮಾರಂಭದಲ್ಲಿ ತಮಗೆ ಎದುರಾದ ಸಿದ್ದರಾಮಯ್ಯ ಅವರ ಜತೆ ನಗುತ್ತಲೇ ಮಾತನಾಡಿದ ಸೋಮಣ್ಣ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ವಿಷಯ ಪ್ರಸ್ತಾಪಿಸಿದರಲ್ಲದೇ, ‘ನನ್ನ ಮಾತು ಕೇಳಿ ಆಗಲೇ ನಿವೇಶನ ವಾಪಾಸು ಮಾಡಿದ್ದರೆ ಈ ರೀತಿ ತೊಂದರೆ ಆಗುತ್ತಿರಲಿಲ್ಲ. ನನ್ನ ಮಾತು ಕೇಳಬೇಕಿತ್ತು’ ಎಂದರು.
‘ಸಿದ್ದರಾಮಯ್ಯ ವಿಚಾರದಲ್ಲಿ ನನ್ನದು ನೇರ ಮಾತು. ಬೇರೆಯವರಂತೆ ಹೆದರಿಸುವುದಾಗಲಿ, ಹಿಂದೊಂದು ಮುಂದೊಂದು ಮಾತನಾಡುವುದು ನನಗೆ ಗೊತ್ತಿಲ್ಲ’ ಎಂದೂ ಸೋಮಣ್ಣ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಅದು ಹಾಗಲ್ಲ ಸೋಮಣ್ಣ, ಸುಳ್ಳು ಹೇಳುತ್ತಿದ್ದಾರೆ. ನನ್ನ ಮಾತು ಕೇಳು. ಭೂಸ್ವಾಧೀನ ಕಾಯ್ದೆ ಕುರಿತಂತೆ ಹೇಳು. ವಿಚಾರ ಸರಿಯಾಗಿ ಗೊತ್ತಿಲ್ಲದೇ ಬೇರೇನೋ ವಿಚಾರ ಮಾತನಾಡಬೇಡ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.