ADVERTISEMENT

ಅಕ್ರಮ ಮರಳು ಸಾಗಣೆ ಪ್ರಕರಣ ಕೈಬಿಡಲು ಒತ್ತಾಯ: ಟ್ಯಾಂಕ್ ಏರಿ ಆತ್ಮಹತ್ಯೆಗೆ ಯತ್ನ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2018, 18:06 IST
Last Updated 26 ಅಕ್ಟೋಬರ್ 2018, 18:06 IST
ಹೊಸನಗರದ ಪಟ್ಟಣ ಪಂಚಾಯಿತಿಯ ಮಾರಿಗುಡ್ಡದಲ್ಲಿನ ನೀರಿನ ಟ್ಯಾಂಕ್ ಏರಿ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದರು
ಹೊಸನಗರದ ಪಟ್ಟಣ ಪಂಚಾಯಿತಿಯ ಮಾರಿಗುಡ್ಡದಲ್ಲಿನ ನೀರಿನ ಟ್ಯಾಂಕ್ ಏರಿ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದರು   

ಹೊಸನಗರ: ಪೊಲೀಸ್ ಠಾಣೆಯಲ್ಲಿರುವ ಪ್ರಕರಣ ಹಿಂಪಡೆಯುವಂತೆ ಆಗ್ರಹಿಸಿ ಆರೋಪಿ ಸುಬ್ರಹ್ಮಣ್ಯ ತನ್ನ ಇಬ್ಬರು ಮಕ್ಕಳಾದ ನಿತಿನ್ (12), ಕಾವ್ಯಾ (11) ಅವರೊಂದಿಗೆ ಮಾರಿಗುಡ್ಡದ ನೀರು ಸಂಗ್ರಹ ಟ್ಯಾಂಕ್ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದರು.

ಅರಳಿಕೊಪ್ಪದ ಅಂಬೇಡ್ಕರ್ ಕಾಲೊನಿಯ ಸುಬ್ರಹ್ಮಣ್ಯ ಅವರೂ ಒಳಗೊಂಡಂತೆ 84 ಜನರ ವಿರುದ್ಧ ಮರಳು ಅಕ್ರಮ ಸಾಗಣೆ ಸಂಬಂಧ ಎರಡು ವರ್ಷಗಳ ಹಿಂದೆ ಕಂದಾಯ ಇಲಾಖೆ ಹಾಗೂ ಪೊಲೀಸರು ಪ್ರಕರಣ ದಾಖಲು ಮಾಡಿದ್ದರು.

ಈ ಸಂಬಂಧ ಉಳಿದ ಎಲ್ಲಾ ಆರೋಪಿಗಳಿಗೆ ಜಾಮೀನು ದೊರಕಿತ್ತು. ಆದರೆ ಸುಬ್ರಹ್ಮಣ್ಯ ಅವರಿಗೆ ಮಾತ್ರ ಜಾಮೀನು ದೊರಕಿರಲಿಲ್ಲ.

ADVERTISEMENT

ಇದರಿಂದ ನೊಂದು ಟ್ಯಾಂಕಿನ ಕೆಳಗಿನ ಬಾಗಿಲಿನ ಬೀಗ ಒಡೆದು, ಮಕ್ಕಳೊಂದಿಗೆ ಕ್ರಿಮಿನಾಶಕದೊಂದಿಗೆ ಮೇಲೆ ಏರಿದ್ದರು. ‘ಪ್ರಕರಣ ಹಿಂಪಡೆಯಬೇಕು. ಕುಟುಂಬದ ಆಸ್ತಿ ಪ್ರಕರಣ ಶೀಘ್ರ ವಿಲೇವಾರಿ ಮಾಡಬೇಕು’ ಎಂದು 8 ಗಂಟೆಗಳ ಕಾಲ ಅಲ್ಲಿಯೇ ನಿಂತು ಒತ್ತಾಯಿಸಿದರು.

ಸಿಪಿಐ ಮಂಜುನಾಥ ಗೌಡ, ಜಿಲ್ಲಾ ಪಂಚಾಯಿತಿ ಸದಸ್ಯ ಸುರೇಶ್ ಸ್ವಾಮಿರಾವ್, ತಾಲ್ಲೂಕು ಪಂಚಾಯಿತಿ ಸದಸ್ಯೆ ರುಕ್ಮಿಣಿರಾಜು, ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ ಕಾಲ್ಸಸಿ ಆರೋಪಿಯ ಮನವೊಲಿಸುವಲ್ಲಿ ಯಶಸ್ವಿಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.