ADVERTISEMENT

ಸಲ್ಮಾನ್ ರಶ್ದಿ ಮೇಲಿನ ದಾಳಿ: ಭಯದ ವಾತಾವರಣ ಸೃಷ್ಟಿಸುವ ಹುನ್ನಾರ: ಐಎಂಎಸ್‌ಡಿ

ಪ್ರಮುಖ ಮುಸ್ಲಿಂ ಸಂಘಟನೆಗಳ ಮೌನಕ್ಕೆ ಐಎಂಎಸ್‌ಡಿ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2022, 16:37 IST
Last Updated 22 ಆಗಸ್ಟ್ 2022, 16:37 IST
ಸಲ್ಮಾನ್‌ ರಶ್ದಿ
ಸಲ್ಮಾನ್‌ ರಶ್ದಿ   

ಬೆಂಗಳೂರು: ಅಮೆರಿಕದ ನ್ಯೂಯಾರ್ಕ್‌ನಲ್ಲಿ ನಡೆದ ಬರಹಗಾರ ಸಲ್ಮಾನ್ ರಶ್ದಿ ಮೇಲಿನ ದಾಳಿಯನ್ನು ಇಂಡಿಯನ್ ಮುಸ್ಲಿಮ್ಸ್ ಫಾರ್ ಸೆಕ್ಯುಲರ್ ಡೆಮಾಕ್ರೆಸಿ (ಐಎಂಎಸ್‌ಡಿ) ಖಂಡಿಸಿದೆ. ಇರಾನಿನ ನಾಯಕ ಅಯಾತ್‌ಉಲ್ಲಾ ಅಲಿ ಖೊಮೇನಿ 1989ರಲ್ಲಿ ಹೊರಡಿಸಿದ ಫತ್ವಾವೇ ಆ ದಾಳಿಗೆ ಕಾರಣ ಎಂದು ಹೇಳಿದೆ.

‘ಪ್ರವಾದಿಯವರನ್ನು ನಿಂದಿಸಿದ್ದಾರೆ ಎಂಬ ಆರೋಪಕ್ಕೆ ರಶ್ದಿ ಕಳೆದ 33 ವರ್ಷಗಳಿಂದ ತುತ್ತಾಗಿದ್ದಾರೆ. ‘ಮುಸಲ್ಮಾನರಿಗೆ ಭಾವನಾತ್ಮಕ ನೋವು’ ಉಂಟುಮಾಡಿದ್ದಕ್ಕೆ ರಶ್ದಿ ಅವರು ಕ್ಷಮೆ ಕೇಳಿದ ಮೇಲೆಯೂ ಅವರ ವಿರುದ್ಧದ ಫತ್ವಾ ಜಾರಿಯಲ್ಲಿಯೇ ಇದೆ ಎಂಬುದನ್ನು ಈ ದಾಳಿ ತೋರಿಸುತ್ತದೆ. ಮುಸ್ಲಿಂ ಪ್ರಮುಖ ಸಂಸ್ಥೆ ಮತ್ತು ಸಂಘಟನೆಗಳು ಈ ದಾಳಿಯನ್ನು ಖಂಡಿಸಿಲ್ಲ. ಇಸ್ಲಾಂ ದೇಶಗಳೂ ಮೌನ ವಹಿಸಿವೆ. ಆ ಮೌನವು ಇಸ್ಲಾಂ ದ್ವೇಷಿಗಳಿಗೆ ಬಲ ನೀಡುತ್ತದೆ. ಇಸ್ಲಾಂ ಎಂದರೆ ಹಿಂಸಾಚಾರ ಮತ್ತು ಭಯೋತ್ಪಾದಕ ಮತ ಎಂದು ಟೀಕಿಸಲು ಸುಲಭವಾಗುತ್ತದೆ’ ಎಂದು ಅಭಿಪ್ರಾಯಪಟ್ಟಿದೆ.

‘ಇಸ್ಲಾಮ್ ಧಿಕ್ಕರಿಸಿ ನಡೆದವರು ಕ್ಷಮೆ ಕೇಳಿದರೆ ಅದನ್ನು ಮಾನ್ಯ ಮಾಡಬೇಕು, ಪ್ರವಾದಿ ಮೊಹಮ್ಮದರನ್ನು ನಿಂದಿಸಿದರೆ ಅವರಿಗೆ ಯಾವ ರೀತಿಯ ದಯೆಯನ್ನೂ ತೋರದೆ ತಲೆದಂಡ ಪಡೆಯಬೇಕೆಂದು ಇಸ್ಲಾಂ ದೈವಮತಶಾಸ್ತ್ರ ಹೇಳುತ್ತದೆ. ರಶ್ದಿ ಅವರ ‘ಸೆಟಾನಿಕ್ ವರ್ಸಸ್’ ಕಾದಂಬರಿ ಪ್ರಕಟವಾದಾಗ ಇನ್ನೂ ಹುಟ್ಟಿಯೇ ಇಲ್ಲದ ಹದಿ ಮತಾರ್ ಎಂಬ ಯುವಕ ಅಯಾತ್‌ಉಲ್ಲಾ ಅಲಿ ಖೊಮೇನಿ ಹೊರಡಿಸಿದ ಫತ್ವಾ ಜಾರಿಗೊಳಿಸಲು ಹೊರಟಿದ್ದು, ಅದನ್ನು ಎಲ್ಲರೂ ಖಂಡಿಸಬೇಕು’ ಎಂದು ಹೇಳಿದೆ.

ADVERTISEMENT

‘ಪ್ರವಾದಿಯನ್ನು ನಿಂದಿಸಿದರು ಎಂಬ ಕಾರಣಕ್ಕೆ ಕನ್ಹಯ್ಯಾ ಲಾಲ್ ಅವರನ್ನು ಮತಾಂಧರು ಕೊಲೆ ಮಾಡಿದರು. ಇಸ್ಲಾಂ ಪ್ರಮುಖ ಸಂಘಟನೆಗಳು ಅದನ್ನು ಖಂಡಿಸಿದವು. ಆದರೆ, ಅದು ಮತೀಯ ದ್ವೇಷದಿಂದ ಆದ ಘಟನೆ ಎಂದಷ್ಟೇ ಹೇಳಿದವೇ ಹೊರತು ಪ್ರವಾದಿಯವರನ್ನು ನಿಂದಿಸಿದ್ದರಿಂದ ಆದ ಕೊಲೆ ಎಂದು ಹೇಳಲಿಲ್ಲ. ಆ ಸತ್ಯವನ್ನು ಗುರುತಿಸಿ ಒಪ್ಪಿಕೊಳ್ಳಲು ಸಂಘಟನೆಗಳು ತಯಾರಿಲ್ಲ. ಇದು ಶುದ್ಧ ಆಷಾಢಭೂತಿತನ. ಈ ರೀತಿಯ ಅಪ್ರಾಮಾಣಿಕತೆಯಿಂದ ಮುಸ್ಲಿಂ ಸಮುದಾಯ ಇನ್ನಷ್ಟು ದುರ್ಬಲಗೊಳ್ಳುತ್ತದೆ. ಉಳಿದ ಸಮುದಾಯಗಳಿಂದ ಇನ್ನಷ್ಟು ದೂರವಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದೆ.

‘ತಮ್ಮವರ ಮೇಲೆ ದಾಳಿಯಾದಾಗಲಷ್ಟೆ ಸಂಘಟನೆಗಳಿಗೆ ಮಾನವ ಹಕ್ಕುಗಳ ಬಗ್ಗೆ ನೆನಪಾಗುತ್ತದೆ. ಬೇರೆವರಿಗೂ ಆ ಹಕ್ಕು ಮತ್ತು ಘನತೆ ಇರುತ್ತದೆ ಎಂಬುದನ್ನು ಗುರುತಿಸದಿರುವುದು ಸಲ್ಲದ ನಡೆ. ಅಲ್ಪಸಂಖ್ಯಾತರು ಒಂದು ಸಮುದಾಯವಾಗಿ ಮುಕ್ತವಾದ ಅಭಿವ್ಯಕ್ತಿ ಮತ್ತು ಭಿನ್ನಮತ ಮಂಡನೆಗೆ ಅವಕಾಶ ಇರಬೇಕಾದದ್ದು ಮುಖ್ಯ ಎಂದು ಹೇಳಬೇಕು. ಪ್ರಜಾಸತ್ತೆಯುಳ್ಳ ದೇಶದ ಭಾಗವಾಗಿದ್ದುಕೊಂಡು ಧರ್ಮದ ಟೀಕೆಯ ನಿಷೇಧಕ್ಕಾಗಿ ರಾಷ್ಟ್ರೀಯ ಕಾನೂನೊಂದು ಬೇಕು ಎಂದು ಒತ್ತಾಯಿಸುತ್ತಿರುವುದು ದುರದೃಷ್ಟಕರ. ಇಸ್ಲಾಂ ಧರ್ಮ ಮತ್ತು ಮಾನವ ಹಕ್ಕುಗಳ ನಡುವೆ ಹೊಂದಾಣಿಕೆ ಸಾಧ್ಯವಿಲ್ಲ ಎಂದು ಹೇಳಲು ಹಿಂದೂ ಬಲಪಂಥೀಯರೇ ಬೇಕೆಂದಿಲ್ಲ. ಸ್ವತಃ ಮುಸಲ್ಮಾನರೇ ಬಹಳ ದಿವಸಗಳಿಂದ ಆ ನಿಲುವು ವ್ಯಕ್ತಪಡಿಸುತ್ತಿದ್ದಾರೆ.’

‘ಮುಕ್ತವಾಗಿ ಮಾತಾಡಲು, ಬರೆಯಲು, ಓದಲು ಮತ್ತು ಭಿನ್ನಮತ ತಾಳಲು ಸಾಧ್ಯವಾಗದಿದ್ದರೆ ನಮ್ಮ ಸಂವಿಧಾನದಲ್ಲಿ ನೆಲೆಸಿರುವ ಸ್ವಾತಂತ್ರ್ಯದ ತತ್ತ್ವಗಳನ್ನು ನಾವು ಎತ್ತಿಹಿಡಿದಂತೆ ಆಗುವುದಿಲ್ಲ. ನಾವು ನಮ್ಮ ಗಣರಾಜ್ಯದ ಮೌಲ್ಯಗಳನ್ನು ಎತ್ತಿ ಹಿಡಿಯಲು ಸಾಧ್ಯವಾಗುವುದು ಸ್ವಾತಂತ್ರ್ಯದ ಆ ತತ್ತ್ವಗಳನ್ನು ಕಾಪಾಡಿದಾಗ ಮಾತ್ರ. ದೊಡ್ಡ ಬಿಕ್ಕಟ್ಟಿನ ಈ ಗಳಿಗೆಯಲ್ಲಿ ಸಲ್ಮಾನ್ ರಶ್ದಿ ಅವರ ಜೊತೆ ದೃಢವಾಗಿ ನಿಂತಿದ್ದೇವೆ, ಅವರು ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತಿದ್ದೇವೆ’ ಎಂದು ಐಎಂಎಸ್‌ಡಿ ಹೇಳಿದೆ.

‘ಧರ್ಮದ ಟೀಕೆಯ ವಿಷಯದಲ್ಲಿ ತಾವು ತಳೆಯುತ್ತ ಬಂದಿರುವ ನಿಲುವನ್ನು ಎಲ್ಲಾ ಮುಸ್ಲಿಂ ಸಂಘಟನೆಗಳೂ ಮರು ವಿವೇಚನೆಗೆ ಒಳಪಡಿಸಬೇಕಿದೆ’ ಎಂದು ಐಎಂಎಸ್‌ಡಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. ಲೇಖಕ ರಾಮ್ ಪುನಿಯಾನಿ, ಹೋರಾಟಗಾರ್ತಿ ಮೇಧಾ ಪಾಟ್ಕರ್, ‘ನ್ಯೂ ಏಜ್‌ ಇಸ್ಲಾಂ’ ಸಂಪಾದಕ ಸುಲ್ತಾನ್ ಶಾಹಿನ್ ಸೇರಿ 61 ಮಂದಿ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದೆ.

ಬೆಂಬಲ ನೀಡುತ್ತಿರುವವರು

ಪ್ರೊ. ರಾಮ್ ಪುನಿಯಾನಿ, ಲೇಖಕರು, ಮುಂಬೈ

ಮೇಧಾ ಪಾಟ್ಕರ್, ಹೋರಾಟಗಾರ್ತಿ

ಸುಲ್ತಾನ್ ಶಾಹಿನ್, ಸಂಪಾದಕ, ನ್ಯೂ ಏಜ್ ಇಸ್ಲಾಂ, ದೆಹಲಿ

ಪ್ರೊ. ಜೀನತ್ ಶೌಕತ್ ಅಲಿ, ಇಸ್ಲಾಮಿಕ್ ವಿದ್ವಾಂಸ, ಮುಂಬೈ

ಯೋಗೇಂದ್ರ ಯಾದವ್, ಸ್ವರಾಜ್ ಅಭಿಯಾನ

ಆನಂದ್ ಪಟವರ್ಧನ್, ಸಾಕ್ಷ್ಯಚಿತ್ರ ನಿರ್ಮಾಪಕ

ಡಾ. ಸುನಿಲಂ, ರೈತ ನಾಯಕ, ಇಂದೋರ್

ಪ್ರೊ. ಶಂಶುಲ್ ಇಸ್ಲಾಂ, ದೆಹಲಿ

ಝಕಿಯಾ ಸೋಮನ್, ಬಿಎಂಎಂಎ, ಅಹಮದಾಬಾದ್

ಇರ್ಫಾನ್ ಇಂಜಿನಿಯರ್, ಸಿಎಸ್‌ಎಸ್‌ಎಸ್‌, ಮುಂಬೈ

ಅಂಜುಮ್ ರಾಜಬಲಿ, ಚಲನಚಿತ್ರ ಬರಹಗಾರ, ಮುಂಬೈ

ಸಂದೀಪ್ ಪಾಂಡೆ, ಮ್ಯಾಗ್ಸೆಸೆ ಪ್ರಶಸ್ತಿ ವಿಜೇತರು

ನ್ಯಾಯಮೂರ್ತಿ ಕೋಲ್ಸೆ ಪಾಟೀಲ್(ನಿವೃತ್ತ), ಪುಣೆ

ಗುಲಾಮ್ ರಸೂಲ್ ದೆಹಲ್ವಿ, ಶಾಸ್ತ್ರೀಯ ಇಸ್ಲಾಮಿಕ್ ವಿದ್ವಾಂಸರು, ದೆಹಲಿ

ಎ.ಜೆ. ಜವ್ವಾದ್, ಐಎಂಎಸ್‌ಡಿ, ಚೆನ್ನೈ

ಅಮೀರ್ ರಿಜ್ವಿ, ಡಿಸೈನರ್, ಐಎಂಎಸ್‌ಡಿ, ಮುಂಬೈ

ಫೈಸಲ್ ಖಾನ್, ಖುದೈ ಖಿದ್ಮತ್ಗರ್, ದೆಹಲಿ

ಬಿಲಾಲ್ ಖಾನ್, ಐಎಂಎಸ್‌ಡಿ, ಮುಂಬೈ

ಶಬಾನಾ ಡೀನ್, ಐಎಂಎಸ್‌ಡಿ, ಮುಂಬೈ

ಅಲಿ ಭೋಜನಿ, ಐಎಂಎಸ್‌ಡಿ, ಮುಂಬೈ

ಶೀಬಾ ಅಸ್ಲಂ ಫೆರ್ಹಿ, ಸಂಶೋಧಕರು, ದೆಹಲಿ

ಅಜೀಜ್ ಲೋಖಂಡವಾಲಾ, ಐಎಂಎಸ್‌ಡಿ, ಮುಂಬೈ

ಸಲೀಂ ಸಾಬುವಾಲಾ, ಐಎಂಎಸ್‌ಡಿ, ಮುಂಬೈ

ಸಲೀಮ್ ಯೂಸುಫ್, ಐಎಂಎಸ್‌ಡಿ, ಮುಂಬೈ

ಅಸ್ಕರಿ ಜೈದಿ, ಐಎಂಎಸ್‌ಡಿ, ಮುಂಬೈ

ಮಸೂಮಾ ರಣಲ್ವಿ, ಐಎಂಎಸ್‌ಡಿ, ಮುಂಬೈ

ಮುನಿಜಾ ಖಾನ್, ಐಎಂಎಸ್‌ಡಿ, ಮುಂಬೈ

ಹಸೀನಾ ಖಾನ್, ಬೆಬಾಕ್ ಕಲೆಕ್ಟಿವ್, ಮುಂಬೈ

ತೈಝೂನ್ ಖೋರಕಿವಾಲಾ, ಐಎಂಎಸ್‌ಡಿ, ಮುಂಬೈ

ಅಕ್ಬರ್ ಶೇಖ್, ಐಎಂಎಸ್‌ಡಿ, ಸಾಂಗ್ಲಿ

ಮುಹಮ್ಮದ್ ಇಮ್ರಾನ್, ಅಮೆರಿಕ

ಸಾದಿಕ್ ಬಾಷಾ, ಐಎಂಎಸ್‌ಡಿ, ಮುಂಬೈ

ಮನ್ಸೂರ್ ಸರ್ದಾರ್, ಭಿವಂಡಿ

ನೂರುದ್ದೀನ್ ನಾಯಕ್, ಐಎಂಎಸ್‌ಡಿ, ಮುಂಬೈ

ಕಾಸಿಂ ಸೈಫ್, ಚೆನ್ನೈ

ಪ್ರೊ. ಕಮರ್ಜಹಾನ್

ಲತಾ ಪಿ.ಎಂ., ಸಂಶೋಧಕಿ, ಬಹುಜನ ಸ್ತ್ರೀವಾದಿ, ಮುಂಬೈ

ಪ್ರೊ. ರೂಪರೇಖಾ ವರ್ಮಾ, ಲಖನೌ

ಪ್ರೊ. ರಾಕೇಶ್ ರಫೀಕ್, ಮೊರಾದಾಬಾದ್

ಪ್ರೊ. ರಾಜೀವ್, ಲಖನೌ

ಜಾಗೃತಿ ರಾಹಿ, ಗಾಂಧಿವಾದಿ, ವಾರಣಾಸಿ

ಪ್ರೊ. ಅಜಿತ್ ಝಾ, ಸ್ವರಾಜ್ ಅಭಿಯಾನ, ದೆಹಲಿ

ಗೀತಾ ಶೇಷು, ಪತ್ರಕರ್ತೆ, ಮುಕ್ತ ಭಾಷಣ ಕಲೆಕ್ಟಿವ್, ಮುಂಬೈ

ಥಾಮಸ್ ಮ್ಯಾಥ್ಯೂ, ದೆಹಲಿ

ಅರುಣ್ ಮಜಿ, ದಲಿತ ಮಾನವ ಹಕ್ಕುಗಳ ರಕ್ಷಣಾಧಿಕಾರಿ, ಕೋಲ್ಕತ್ತ

ಶೇಖರ್ ಸೋನಾಲ್ಕರ್, ಬರಹಗಾರ, ಶೋಲಾಪುರ

ಲಾರಾ ಜೆಸಾನಿ, ಐಎಂಎಸ್‌ಡಿ, ಮುಂಬೈ

ಪುತುಲ್, ಸರ್ವೋದಯ, ವಾರಾಣಸಿ

ವರ್ಷ ವಿದ್ಯಾ ವಿಲಾಸ್, ಸಾಮಾಜಿಕ ಕಾರ್ಯಕರ್ತೆ, ಮುಂಬೈ

ಗುಡ್ಡಿ ಎಸ್.ಎಲ್., ಸಾಮಾಜಿಕ ಕಾರ್ಯಕರ್ತ, ಮುಂಬೈ

ಜ್ಯೋತಿ ಬಡೇಕರ್, ಸಾಮಾಜಿಕ ಕಾರ್ಯಕರ್ತೆ, ಮುಂಬೈ

ರವಿ ಭಿಲಾನೆ, ಪತ್ರಕರ್ತ, ಮುಂಬೈ

ವಿಶಾಲ್ ಹಿವಾಲೆ, ಸಂವಿಧಾನ ಉಳಿಸಿ ಆಂದೋಲನ, ಮುಂಬೈ

ಪ್ರೊ. ಓಂ ದಮಾನಿ, ಮುಂಬೈ

ಪ್ರೊ. ವಸಂತ ರಾಮನ್

ಪ್ರೊ. ದೀಪಕ್ ಮಲಿಕ್

ಪ್ರೊ. ಸೈರಸ್ ಗೊಂಡ

ಯಶೋಧನ್ ಪರಂಜ್ಪೆ, ಐಎಂಎಸ್‌ಡಿ, ಮುಂಬೈ

ಶಾಲಿನಿ ಧವನ್, ಡಿಸೈನರ್, ಮುಂಬೈ

ನೀಲಿಮಾ ಶರ್ಮಾ

ಎಸ್.ರಘುನಂದನ, ನಾಟಕಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.