ADVERTISEMENT

ಜುಬಿಲೆಂಟ್‌ನಿಂದ ಕೋವಿಡ್‌ಗೆ ಚುಚ್ಚುಮದ್ದು‌: ಬಾಟಲಿಗೆ ₹ 4,700

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2020, 16:55 IST
Last Updated 3 ಆಗಸ್ಟ್ 2020, 16:55 IST
   

ಮೈಸೂರು: ಔಷಧ ತಯಾರಿಕಾ ಕಂಪನಿ ಜುಬಿಲೆಂಟ್‌ ಲೈಫ್‌ ಸೈನ್ಸ್‌ ಲಿಮಿಟೆಡ್‌, ಕೋವಿಡ್‌–19 ಚಿಕಿತ್ಸೆಗಾಗಿ ರೆಮ್ಡೆಸಿವಿರ್‌ ಚುಚ್ಚುಮದ್ದು ಬಿಡುಗಡೆ ಮಾಡಿದ್ದು, 100 ಮಿಲಿ ಗ್ರಾಂನ ಬಾಟಲಿಗೆ ₹ 4,700 ದರ ವಿಧಿಸುವುದಾಗಿ ಪ್ರಕಟಿಸಿದೆ.

‘ಅಂಗಸಂಸ್ಥೆಯಾದ ಜುಬಿಲೆಂಟ್‌ ಜೆನೆರಿಕ್ಸ್‌ ವತಿಯಿಂದ ‘ಜುಬಿ–ಆರ್’ ಬ್ರ್ಯಾಂಡ್‌ನಡಿ ಈ ಔಷಧವನ್ನು ದೇಶದ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ದೇಶದ 1,000 ಆಸ್ಪತ್ರೆಗಳಿಗೆ ಈ ಔಷಧ ಪೂರೈಸಲಾಗುವುದು. ಜೀವನ ರಕ್ಷಕವಾಗಿ ಈ ಔಷಧ ಮಹತ್ವದ ಪಾತ್ರ ವಹಿಸಲಿದೆ’ ಎಂದು ಸಂಸ್ಥೆಯ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಶ್ಯಾಮ್‌ ಎಸ್‌.ಭಾರ್ತಿಯ ಹಾಗೂ ಸಹ ಅಧ್ಯಕ್ಷ ಹರಿ ಎಸ್‌.ಭಾರ್ತಿಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಮೆರಿಕದ ಗಿಲೀಡ್‌ ಸೈನ್ಸಸ್‌ ಸಂಸ್ಥೆ ಅಭಿವೃದ್ಧಿಪಡಿಸಿದ ರೆಮ್ಡೆಸಿವಿರ್‌ ಔಷಧದ ತಯಾರಿಕೆ ಹಾಗೂ ಮಾರಾಟ ಹಕ್ಕನ್ನು ಮೇನಲ್ಲಿ ಜುಬಿಲೆಂಟ್‌ ಜೆನೆರಿಕ್ಸ್‌ ಲಿಮಿಟೆಡ್‌ ಪಡೆದುಕೊಂಡಿತ್ತು. ಇದಕ್ಕೆ ಜುಲೈ 20ರಂದು ಡ್ರಗ್‌ ಕಂಟ್ರೋಲರ್‌ ಜನರಲ್‌ ಆಫ್‌ ಇಂಡಿಯಾ (ಡಿಸಿಜಿಐ) ಅನುಮೋದನೆ ನೀಡಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

ADVERTISEMENT

ನೊಯಿಡಾ ಮೂಲದ ಈ ಕಂಪನಿಯು ನಂಜನಗೂಡಿನಲ್ಲಿ ಔಷಧ ತಯಾರಿಕಾ ಘಟಕ ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.